ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

ಬೆಂಗಳೂರು, ಜ 28 :     ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ

ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಕೃಷ್ಣ ಮತ್ತು ಮಿಲನ ನಾಗರಾಜ್ ಬಂಡವಾಳ ಹೂಡಿದ್ದು, ಜೋಡಿಯಾಗಿ ಅಭಿನಯಿಸಿದ್ದಾರೆ  

‘ಮದರಂಗಿ’ ಬಳಿಕ 5 ವರ್ಷ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಕೃಷ್ಣ, ಕೊನೆಗೊಂದು ದಿನ ತಾವೇ ಚಿತ್ರ ಮಾಡಲು ಮನಸ್ಸು ಮಾಡಿದಾಗ ಹೊಳೆದಿದ್ದೇ ’ಲವ್ ಮಾಕ್ ಟೇಲ್‍’ ಚಿತ್ರಕಥೆ  

ಚಿತ್ರಕ್ಕೆ ಬಂಡವಾಳ ಹೂಡಲು ಕೃಷ್ಣ ಜತೆ ಕೈ ಜೋಡಿಸಲು ಒಪ್ಪಿದ ಮಿಲನ ನಾಗರಾಜ್,  ಚಿತ್ರೀಕರಣ ಶುರುವಾದ ಬಳಿಕ ಹೇರ್ ಕಟ್ ಮಾಡಿಸಲೇಬೇಕು ಅಂತ ಆಗ್ರಹಿಸಿದ್ರಂತೆ”ಉದ್ದ ಕೂದಲಿನಲ್ಲಿ ಡಾರ್ಲಿಂಗ್ ಕೃಷ್ಣನ ಅವತಾರ ನೋಡಿ ಪ್ರೇಕ್ಷಕರಿಗೆ ಸಾಕಾಗಿದೆ ಲವ್ ಮಾಕ್‍ ಟೇಲ್‍ ನಲ್ಲಿ ಕೊಂಚ ಭಿನ್ನವಾಗಿರಲಿ” ಅಂತ ಒತ್ತಾಯಿಸದೆ ಎಂದು ಸ್ವತಃ ಮಿಲನ್ ನಾಗರಾಜ್‍ ಸುದ್ದಿಗೋಷ್ಠಿಗೆ ತಿಳಿಸಿದ್ದಾರೆ. 

ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಕಾಲೇಜು ಯುವಕ ಮತ್ತು 30ರ ವಯೋಮಾನದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಅಮೃತಾ, ಅಭಿಲಾಷ್, ರಚನಾ, ಧನುಷ್ ಪ್ರಣವ್ ಮೊದಲಾದವರು ತಾರಾಗಣದಲ್ಲಿ ಇದೇ 31ರಂದು 150ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ತೆರೆ ಕಾಣಲಿದೆ.