ದೀಪಾವಳಿ ಸಮೀಪಿಸುತ್ತಿರುವಾಗಲೇ ರಾಜ್ಯದಲ್ಲಿ ಕತ್ತಲು

2-3ಗಂಟೆ ಲೋಡ್ಶೆಡ್ಡಿಂಗ ಸಾಧ್ಯತೆ

ಬೆಂಗಳೂರು, .23- ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವಾಗಲೇ ಕನರ್ಾಟಕಕ್ಕೆ ಕತ್ತಲು ಆವರಿಸುವ ಸಂದರ್ಭಗಳು ಗೋಚರಿಸುತ್ತಿವೆ.

                ಕಾರಣ ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ರಾಜ್ಯ ಸಕರ್ಾರ ಲೋಡ್ಶೆಡ್ಡಿಂಗ್ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.

                ಬೆಂಗಳೂರು ವಲಯದಲ್ಲಿ ಬೆಳಗ್ಗೆ ಒಂದು ಗಂಟೆ ಹಾಗೂ ಸಂಜೆ ಒಂದು ಗಂಟೆ, ಇತರೆ ಭಾಗಗಳಲ್ಲಿ ದಿನಕ್ಕೆ ಎರಡರಿಂದ ಮೂರು ಗಂಟೆ ಲೋಡ್ಶೆಡ್ಡಿಂಗ್ ಅಳವಡಿಸಲು ಸಕರ್ಾರ ಮುಂದಾಗಿದೆ ಎಂದು ಕೇಳಿ ಬಂದಿದೆ.

                ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ರಾಯಚೂರು ಉತ್ಪಾದನಾ ಘಟಕ ಕಲ್ಲಿದ್ದಲು ಕೊರತೆ ಎದುರಿಸುತ್ತಿರುವುದರಿಂದ ಇದರ ಎರಡು ಘಟಕಗಳು ಕಳೆದ ಒಂದು ವಾರದಿಂದ ಸ್ಥಗಿತಗೊಂಡಿವೆ.

                ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿರುವುದರಿಂದ ತಕ್ಷಣವೇ ಕೇಂದ್ರ ಸಕರ್ಾರ ಕಲ್ಲಿದ್ದಲು ಪೂರೈಕೆ ಮಾಡಬೇಕೆಂದು ಪತ್ರ ಬರೆದಿದ್ದರು.

                ಕೇಂದ್ರ ಇಂಧನ ಸಚಿವ ಪಿಯೂಸ್ಗೋಯಲ್ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ನಿಗದಿಪಡಿಸಿರುವ ಕಲ್ಲಿದ್ದನ್ನು ಒದಗಿಸದಿದ್ದರೆ ಸಮಸ್ಯೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.ಪತ್ರ ಬರೆದು ಹಲವು ದಿನಗಳಾದರೂ ಕೇಂದ್ರದಿಂದ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಸದ್ಯಕ್ಕೆ ಸಂಗ್ರಹಿಸಲ್ಪಟ್ಟಿದ್ದ ಕಲ್ಲಿದ್ದಲಿನಿಂದಲೇ ಆರ್ಟಿಪಿಎಸ್ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.

                 ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡಿರುವ ಕೆಪಿಟಿಸಿಎಲ್ ಅಧಿಕಾರಿಗಳು ಲೋಡ್ಶೆಡ್ಡಿಂಗ್ ಮಾಡುವುದು ಅನಿವಾರ್ಯ ಎಂದು ಸಕರ್ಾರಕ್ಕೆ ಮನವಿ ಮಾಡಿದ್ದಾರೆ.

                ನಮ್ಮಲ್ಲಿ ಸಂಗ್ರಹವಿರುವ ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುತ್ತದೆ. ಹೀಗಾಗಿ ಬೆಂಗಳೂರು ವ್ಯಾಪ್ತಿಯ ಬೆಸ್ಕಾಂನಲ್ಲಿ ಎರಡು ಗಂಟೆ, ಇತರೆ ಕಡೆ ಮೂರು ಗಂಟೆ ಲೋಡ್ಶೆಡ್ಡಿಂಗ್ ಜಾರಿಮಾಡುವಂತೆ ಒತ್ತಡ ಹಾಕಿದೆ.

                ಈಗಾಗಲೇ ಮುಖ್ಯಮಂತ್ರಿಯವರು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚಚರ್ೆ ನಡೆಸಿ ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗ್ಗೆ- ಸಂಜೆ ಒಂದು ಗಂಟೆ, ಗ್ರಾಮೀಣ ಭಾಗಗಳಲ್ಲಿ ಮೂರು ಗಂಟೆ ಲೋಡ್ಶೆಡ್ಡಿಂಗ್ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

                ಬೇಡಿಕೆ ಎಷ್ಟಿದೆ:

                ರಾಜ್ಯದಲ್ಲಿ ದಿನಕ್ಕೆ ಸುಮಾರು 4200 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಕುಡಿಯುವ ನೀರು, ರೈತರ ಪಂಪ್ಸೆಟ್ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಇಷ್ಟು ಪ್ರಮಾಣದ ವಿದ್ಯುತ್  ಉತ್ಪಾದನೆ ಮಾಡಬೇಕು. ಪ್ರಸ್ತುತ ಇಂಧನ ಇಲಾಖೆ ದಿನವೊಂದಕ್ಕೆ 3800ರಿಂದ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿದೆ.

                ನಮ್ಮಲ್ಲಿರುವ ಕಲ್ಲಿದ್ದಲು ಹಾಗೂ ಇತರೆ ಸಂಪನ್ಮೂಲಗಳ ಕ್ರೂಢೀಕರಣದಿಂದ  ಹೆಚ್ಚೆಂದರೆ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಲೋಡ್ಶೆಡ್ಡಿಂಗ್ ಜಾರಿಯಾದರೆ ಕನಿಷ್ಠ 200ರಿಂದ 400 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗುತ್ತದೆ ಎಂಬುದು ಅಧಿಕಾರಿಗಳ ವಾದ.

                ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಕೇಂದ್ರದಿಂದ ಕಲ್ಲಿದ್ದಲು ಪೂರೈಕೆಯಾಗದ ಕಾರಣ ಉತ್ಪಾದನಾ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದ ಕಾರಣ ಲೋಡ್ಶೆಡ್ಡಿಂಗ್ ಜಾರಿ ಮಾಡಲೇಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                ಕೇಂದ್ರದಿಂದ ನಮಗೆ ಎರಡು ಲಕ್ಷ ಟನ್ ಕಲ್ಲಿದ್ದಲು ಒಪ್ಪಂದದ ಪ್ರಕಾರ ಪೂರೈಕೆಯಾಗಬೇಕು. ಆದರೆ, ಕೇವಲ ಇದುವರೆಗೂ 10 ಸಾವಿರ ಟನ್ ಮಾತ್ರ ಕಲ್ಲಿದ್ದಲು ಪೂರೈಕೆಯಾಗಿದೆ. ಪ್ರಮುಖ  ಉತ್ಪಾದನಾ ಕೇಂದ್ರಗಳಾದ ಆರ್ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್ ಮತ್ತು ಯರಮರಸ್ನ ವೈಟಿಪಿಎಸ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಖಾಲಿಯಾಗಿದೆ.

                ಸದ್ಯಕ್ಕೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿಮರ್ಾಣವಾಗುತ್ತಿರುವ ಸೋಲಾರ್ ವಿದ್ಯುತ್ ಘಟಕ ಏಕೈಕ ಆಶಾಕಿರಣವಾಗಿದೆ. ಒಂದು ವೇಳೆ ಕೇಂದ್ರದಿಂದ ಕಲ್ಲಿದ್ದಲು ಪೂರೈಕೆಯಾಗದಿದ್ದರೆ ಕರುನಾಡು ಕತ್ತಲಲ್ಲಿ ಮುಳುಗುವುದು ಖಚಿತ.