ದಾರೀದೀಪ ಸಂಸ್ಥೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ
Darideepa Foundation distributes umbrellas to street vendors
ಗದಗ 28 :"ಬಿಸಿಲು-ಮಳೆಯೆನ್ನದೆ ರಸ್ತೆ ಬದಿಯಲ್ಲೇ ಕುಳಿತು ಬದುಕು ಕಟ್ಟಿಕೊಳ್ಳುವ ಶ್ರಮಿಕ ವರ್ಗದ ಕಷ್ಟಗಳು ವರ್ಣನಾತೀತ. ಇಂತಹ ಅಸಂಘಟಿತ ವಲಯದ ಬೀದಿ ಬದಿ ವ್ಯಾಪಾರಿಗಳ ಹಾಗೂ ವೃದ್ಧರ ಆರೋಗ್ಯ ಮತ್ತು ಸುರಕ್ಷತೆಗೆ ಸಮಾಜ ಮುಂಚೂಣಿಯಲ್ಲಿ ನಿಂತು ಆಸರೆಯಾಗಬೇಕಿದೆ" ಎಂದು ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಅವರು ಪ್ರತಿಪಾದಿಸಿದರು.
ನಗರದ ಸಿದ್ದರಾಮೇಶ್ವರ ನಗರ ಹಾಗೂ ಪ್ರಮುಖ ತರಕಾರಿ ಮಾರುಕಟ್ಟೆಯ ಆವರಣದಲ್ಲಿ ಸುಡು ಬಿಸಿಲಿನಲ್ಲಿಯೇ ವ್ಯಾಪಾರ ಮಾಡುವ ವೃದ್ಧರಿಗೆ ಹಾಗೂ ಮಹಿಳಾ ವ್ಯಾಪಾರಸ್ಥರಿಗೆ ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು, ಸಮಾಜ ಸೇವಕರೂ ಆದ ಕೃಷ್ಣಾ ಎಚ್. ಹಡಪದ ಅವರ ವಿಶೇಷ ಆರ್ಥಿಕ ಸೌಜನ್ಯ ಹಾಗೂ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಮಾನವೀಯತೆಯ ಕೊಡೆ (ಛತ್ರಿ)’ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ತಾಪಮಾನದ ಏರಿಳಿತ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ಮಳೆಗಾಲದ ಮುನ್ಸೂಚನೆಯು ಬೀದಿ ಬದಿ ವ್ಯಾಪಾರಿಗಳ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ತಲೆಯ ಮೇಲೊಂದು ಸೂರಿಲ್ಲದೆ ವ್ಯಾಪಾರ ಮಾಡುವ ಇಂತಹ ಶ್ರಮಿಕ ವರ್ಗಕ್ಕೆ ಸಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ಈ ಕೊಡೆಗಳನ್ನು ವಿತರಿಸಲಾಗುತ್ತಿದೆ ಎಂದು ಶ್ರೀಮತಿ ಶಕುಂತಲಾ ಮುಳುಗುಂದ ಅವರು ಅತ್ಯಂತ ಭಾವನಾತ್ಮಕವಾಗಿ ನುಡಿದರು. ಸಂಸ್ಥೆಯ ಪ್ರಮುಖ ಪದಾಧಿಕಾರಿಗಳಾದ ಜ್ಯೋತಿ ದೇಸಾಯಿ ಗೌಡರ, ವಿಜಯಲಕ್ಷ್ಮಿ ಅಸೂಟಿ, ರಾಜೇಶ್ವರಿ ಕುಲಕರ್ಣಿ, ಶಶಿಕಲಾ ಗಾವಡಿ ಹಾಗೂ ರಮ್ಯಾ ಗಾವಡಿ ಅವರು ಪ್ರತ್ಯೇಕವಾಗಿ ಮಾತನಾಡಿ, ಕೇವಲ ಭಾಷಣಗಳಿಗೆ ಸೀಮಿತವಾಗದೆ ತಳಮಟ್ಟದ ಜನರ ಕಷ್ಟಗಳಿಗೆ ಸ್ವಯಂಪ್ರೇರಿತರಾಗಿ ಸ್ಪಂದಿಸುವ ಕೃಷ್ಣಾ ಎಚ್ ಹಡಪದ ಅವರ ಸಮಾಜಮುಖಿ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಿ ಕಾರ್ೊರೇಷನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಗಾವಡಿ ಅವರು ಮಾತನಾಡಿ, ಇಂತಹ ಸಣ್ಣ ಸಣ್ಣ ಸೇವಾ ಕಾರ್ಯಗಳು ದೊಡ್ಡ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತವೆ ಎಂದರು. ಪ್ರಮುಖರಾದ ದೇವಿ, ಲಕ್ಷ್ಮಿ ಸೇರಿದಂತೆ ಸಿದ್ದರಾಮೇಶ್ವರ ನಗರ ಮತ್ತು ತರಕಾರಿ ಮಾರುಕಟ್ಟೆಯ ನೂರಾರು ಮಹಿಳಾ ಹಾಗೂ ಪುರುಷ ಶ್ರಮಿಕರು ಉಪಸ್ಥಿತರಿದ್ದರು. ಕೊಡೆಗಳನ್ನು ಪಡೆದ ವೃದ್ಧರು ಹಾಗೂ ಬೀದಿ ಬದಿ ವ್ಯಾಪಾರಿಗಳು ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಮತ್ತು ಕೃಷ್ಣಾ ಎಚ್ ಹಡಪದ ಅವರ ಮಾನವೀಯ ಕಾರ್ಯವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 