ದರ್ಗಾಶಾಂತಿ-ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಕೇಂದ್ರ
Dargashanti - A center for harmony and human values
ಗದಗ 22: ದರ್ಗಾ ಎಂದರೆ ಕೇವಲ ಧಾರ್ಮಿಕ ಬಂಧನವಲ್ಲ; ಇದು ಶಾಂತಿ, ಪ್ರೀತಿ, ಸಹಿಷ್ಣುತೆ, ಸಾಮರಸ್ಯ ಹಾಗೂ ಮಾನವೀಯತೆ ಹರಡುವ ಪವಿತ್ರತಾಣ. ಇಲ್ಲಿ ಬರುವ ಪ್ರತಿಯೊಬ್ಬರೂತಮ್ಮ ಮನದ ಭಾರವನ್ನು ಇಳಿಸಿ ನೆಮ್ಮದಿ ಮತ್ತು ಆಶೀರ್ವಾದವನ್ನು ಪಡೆದು ಹಿಂತಿರುಗುತ್ತಾರೆಎಂದು ಗುಲಬರ್ಗಾದ ಸಜ್ಜಾ ದೇನಶಿನ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರು ಹೇಳಿದರು.
ನಗರದ ಕಾಗದಗಾರ ಓಣಿಯಲ್ಲಿ ಹಜರತ್ ಸೈಯದ್ ಶಾವಲಿ ದರ್ಗಾದ ನವೀಕರಿಸಲಾದ ಕಟ್ಟಡ ಹಾಗೂ ನೂತನ ನೆಮ್ಮದಿ ಭವನಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದರ್ಗಾ ಕೇವಲ ಆರಾಧನೆಯ ಸ್ಥಳವಷ್ಟೇ ಅಲ್ಲ, ಅದು ಶಾಂತಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಕೇಂದ್ರವಾಗಿದೆ. ನೆಮ್ಮದಿ ಕೇಂದ್ರವುಜನರಿಗೆ ಸೇವೆಯ ಮನೋಭಾವವನ್ನು ಹೆಚ್ಚಿಸುವ ವೇದಿಕೆಎಂದು ಹೇಳಿದರು.
ಇಂದು ಉದ್ಘಾಟನೆಯಾಗುತ್ತಿರುವ ನೆಮ್ಮದಿ ಕೇಂದ್ರ ನಮ್ಮ ಸಮುದಾಯದ ಕಲ್ಯಾಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯ ತಪಾಸಣೆ, ಮಾರ್ಗದರ್ಶನ, ಸೇವಾ ಕೇಂದ್ರ ಮತ್ತು ಸಾರ್ವಜನಿಕ ನೆರವಿನ ವಿವಿಧ ವಿಭಾಗಗಳ ಮೂಲಕ ಜನರ ಅಗತ್ಯಗಳನ್ನು ಪೂರೈಸುವ ಸರ್ವಸನ್ನಾಹಿತ ವ್ಯವಸ್ಥೆಯನ್ನು ಇಲ್ಲಿ ಒದಗಿಸಲಾಗಿರುವುದು ಸಂತಸತಂದಿದೆ ಗದಗ-ಬೆಟಗೇರಿ ನಗರಸಭೆಯ 17ನೇ ವಾರ್ಡನ ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ ಹಾಗೂ ಕಾಂಗ್ರೆಸ್‌ಯುವ ಮುಖಂಡ ಮುನ್ನಾಸಾಬ ಅ. ರೇಶ್ಮಿ, ಮೊಹ್ಮದಲಿ ಕಾಗದ ಗಾರಜಂದಿಸಾಬ ಕಾಗದಗಾರ, ಹಾಮಿದುಲ್ಲಾ ಶಿರಹಟ್ಟಿ,
ಮಹ್ಮದಲಿ ದೊಡ್ಡಮನಿ, ಮೆಹಬೂಬ ಕಾಗದಗಾರ, ಮಹ್ಮದರಫೀಕಡಾಲಾಯತ ಸೆರಿದಂತೆ ಸೇರಿದಂತೆಕಾಗದಗೇರಿಓಣಿಯ ಸಮಸ್ತ ಗುರು ಹಿರಿಯರುಕೈಗೊಂಡ ಒಳ್ಳೆಯ ಕಾರ್ಯ ಸಮಾಜೋಪಯೋಗಿಯಾಗಿದೆ ಎಂದು, ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾ ಸಾಬ ರೇಶ್ಮಿ, ಜೈನುಲಾಬ್ದೀನ್‌ಆರ್. ನಮಾಜಿ, ಬರಕತಅಲಿ ಮುಲ್ಲಾ, ಪರವೀನಬಾನು ಮುಲ್ಲಾ, ಧಾರವಾಡದ ಕುತುಬ ಅಲಿಶಾ ಮದಾರಿ, ಗಣ್ಯರಾದ ಖಲಂದರ ಗೌಸುಸಾಬ ರೆಹಮಾನವರ, ಪ್ರಭು ಬುರಬುರೆ, ಈಶ್ವರಸಾ ಮೇರವಾಡೆ, ರತ್ನಾಕರಭಟ್ ಜೋಶಿ,ಎಸ್.ಡಿ. ಮಕಾನದಾರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾದಿಕಾರದ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಅನೀಲ ಸಿದ್ದಮ್ಮನಹಳ್ಳಿ, ಇಂಜೀನೀಯರ ಎ.ಎಚ್. ಹೊಸಳ್ಳಿ, ಅಬ್ದುಲರಜಾಕ್‌ಡಂಕೇದ, ಮೊಹ್ಮದ ಯುಸುಫ್ ಇಟಗಿ, ಮೀರಾಸಾಬ ಕಲ್ಯಾಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಜ್ಜಾದೇನಶಿನ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರು ಧಾರ್ಮಿಕ ಮಂತ್ರೋಚ್ಛಾರಣೆ ಮಾಡಿದರು.ಜಿಲ್ಲಾ ಸರಕಾರಿ ವಕೀಲರಾದ ಎಂ.ಎಂ.ಕುಕನೂರ ಸ್ವಾಗತಿಸಿದರು. ಎಂ.ಎಂ. ಶಿರಹಟ್ಟಿ, ಅಲ್ಲಾಭಕ್ಷ ಕೊಟಗಿ ಕಾರ್ಯಕ್ರಮ ನಿರೂಪಿಸಿದರು. ಮಹ್ಮದಲಿ ರೆಹಮಾನಸಾಬ ಕಾಗದಗಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 