ಲಿಂಗರಾಜ ನಗರ ದಸರಾದಲ್ಲಿ ಗಮನ ಸೆಳೆದ ದಾಂಡಿಯಾ

ಲಿಂಗರಾಜ ನಗರ ದಸರಾದಲ್ಲಿ ಗಮನ ಸೆಳೆದ ದಾಂಡಿಯಾ Dandiya attracts attention at Lingarajnagar Dasara

ಹುಬ್ಬಳಿ  25್ಳ: ಇಲ್ಲಿನ ಶ್ರೀ ಕಟ್ಟಿ ಮಂಗಳಾದೇವಿ ದೇವಸ್ಥಾನ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ಮತ್ತು ಸಾಂಸ್ಕೃತಿಕ ಸಮುದಾಯ ಭವನ ಇವರ ಸಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಲಿಂಗರಾಜನಗರ ದಸರಾ 2025 ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಬಡಾವಣೆಯ ಸಮಸ್ತ ಮಹಿಳೆಯರಿಂದ ದಾಂಡಿಯ ಕಾರ್ಯಕ್ರಮ ಜರಗಿತು ದಾಂಡಿಯಾ ಗೆ ಚಾಲನೆ ನೀಡಿದ 

ಮಹಾನಗರ ಪಾಲಿಕೆ ಸದಸ್ಯ ರೂಪ ಶೆಟ್ಟಿಯವರು ಮಾತನಾಡಿ ಬನ್ನಿ ಗಿಡದಲ್ಲಿ ಪಾಂಡವರು ಆಯುಧಗಳ ರಕ್ಷಣೆ ಮಾಡಿದ್ದರಿಂದ ಆ ಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ; ಮರಕ್ಕೆ ಪೂಜೆ ಸಲ್ಲಿಸುವುದು ಎಂದರೆ ಪ್ರಕೃತಿ ಮಾತೆ ಸಲ್ಲಿಸುವ ಗೌರವವಾಗಿದೆ ಎಂದು ಅಭಿಪ್ರಾಯಪಟ್ಡರು. ಮೈಸೂರು ದಸರಾ, ಗುಜರಾತ್ ದಸರಾ, ಬೊಂಬೆಗಳ ದಸರಾ ಮತ್ತಿತರ ದಸರಾ ಆಚರಣೆಗಳನ್ನು ವಿಶ್ಲೇಷಿಸಿದ ಶೆಟ್ಟಿ ಅವರು, ಈ ಎಲ್ಲ ಆಚರಣೆಗಳ ಉದ್ದೇಶ ಹಿಂದೂ ಧರ್ಮದ ರಕ್ಷಣೆಯೇ ಆಗಿದೆ; ವಯಸ್ಸಿನ ಭೇದಭಾವ ಮರೆತು ನಲಿಯುವ ದಾಂಡಿಯಾ ಗುಜರಾತಿನ ಆಚರಣೆಯಾಗಿದ್ದರೂ ಈಗ ವಿಶ್ವಾದ್ಯಂತ ಹೆಸರಾಗಿದೆ. ಈ ಕಲಾ ಪ್ರಕಾರ ನಮ್ಮಲ್ಲಿ ಕೋಲಾಟದ ಹೆಸರಿನಲ್ಲಿ ಮೊದಲಿನಿಂದಲೂ ಇದೆ ಎಂದರು.ಮುಖ್ಯ ಅತಿಥಿಯಾಗಿದ್ದ ಮಿಸ್ ಯನಿವರ್ಸಲ್ ಪೆಟೈಟ್‌-2024ರ ವಿಜೇತೆ ಹಾಗೂ ಚರ್ಮರೋಗ ತಜ್ಞೆ ಡಾ. ಶೃತಿ ಹೆಗಡೆ ಅವರು ಮಾತನಾಡಿ, ಪ್ರತಿದಿನ ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಿ ದಣಿಯುವ ನಗರ ಪ್ರದೇಶ ಜನರಿಗೆ ಏಕತಾನತೆಯನ್ನು ಮುರಿಯಲು ಹಬ್ಬಗಳು ಒಂದು ಉಪಯುಕ್ತ ವೇದಿಕೆಯಾಗಿವೆ. ಅದರಲ್ಲೂ ನವರಾತ್ರಿ ಹಬ್ಬ ಒಂಬತ್ತು ದಿನಗಳ ಕಾಲ ವಿಶೇಷ ಮಹತ್ವ ಹೊಂದಿದ್ದು, ನಮಗೆಲ್ಲ ಜೀವನ ಮೌಲ್ಯಗಳನ್ನು ಬೋಧಿಸುತ್ತದೆ ಎಂದು ಪ್ರತಿಪಾದಿಸಿದರು.ನಂತರ ನಡೆದ ದಾಂಡಿಯಾದಲ್ಲಿ ಡಾ. ಹೆಗಡೆಯವರು ಬಡಾವಣೆಯ ಮಹಿಳೆಯರ ಜೊತೆ ಸತತ ಎರಡು ಗಂಟೆಗಳ ಕಾಲ ಹೆಜ್ಜೆ ಹಾಕಿ ಗಮನ ಸೆಳೆದರು. ನೃತ್ಯ ನಿರ್ದೇಶಕ ರಾಘವೇಂದ್ರ (ರಾಕಿ ಭಾಯ್) ಹಾಗೂ ಸಂಗಡಿಗರು ದಾಡಿಯಾ ಕಾರ್ಯಕ್ರಮ ನಿರ್ದೇಶಿಸಿದರು.ಭೈರ​‍್ಪನವರಿಗೆ ಶ್ರದ್ಧಾಂಜಲಿ: ಕಾರ್ಯಕ್ರಮದ ಮುನ್ನ ಡಾ. ಎಸ್‌. ಎಲ್‌. ಭೈರ​‍್ಪನವರ ಬಗ್ಗೆ ಧಾರವಾಡ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್‌. ಕೌಜಲಗಿ ಅವರು,  ಕಾದಂಬರಿಕಾರ ಭೈರ​‍್ಪನವರು ಹುಬ್ಬಳ್ಳಿಯ ಹೆಸರಾಂತ ಕವಿ ಡಾ. ಡಿ.ಎಸ್‌. ಕರ್ಕಿ ಅವರ ಜೊತೆ ಹೊಂದಿದ್ದ ಒಡನಾಟವನ್ನು ಸ್ಮರಿಸಿದರು. 

ಭೈರ​‍್ಪನವರು ಆತ್ಮಚರಿತ್ರೆ ’ಭಿತ್ತಿ’ಯಲ್ಲಿ ಬರುವ ಹುಬ್ಬಳ್ಳಿಯ ಉಲ್ಲೇಖವನ್ನು ಪ್ರಸ್ತುತಪಡಿಸುವುದರ ಮೂಲಕ ಭೈರ​‍್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಉಮಾ ಮಠದ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ನೇತ್ರಾ ದೇಸಾಯಿ ಸ್ವಾಗತಿಸಿ, ಪರಿಚಯಿಸಿದರು. ಸುಮಾ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.ಠಿಠಠ ಛಿಚಿಠಿಣಠ:ಐಟಿರಚಿಡಿಚಿರಿ ಓಚಿರಚಿಡಿ ಆಛಿಚಿಡಿಚಿ: ಲಿಂಗರಾಜನಗರ ದಸರಾ 2025 ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಡಾ. ಎಸ್‌. ಎಲ್‌. ಭೈರ​‍್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಓಣಜಡಿ ಠಿಜಿ: ಕಾರ​‍್ೊರೇಟರ್ ರೂಪಾ ಶೆಟ್ಟಿ ಮತ್ತು ಮಿಸ್ ಯೂನಿವರ್ಸಲ್ ಪೆಟೈಟ್ 2024 ವಿಜೇತೆ ಡಾ. ಶೃತಿ ಹೆಗಡೆ ಅವರು ಲಿಂಗರಾಜ ನಗರ ದಸರಾ 2025ರ ದಾಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾಗವಹಿಸಿದರು