ಇಂದಿನಿಂದ ದಾನಮ್ಮದೇವಿ ಜಾತ್ರೆ ಆರಂಭ
Danammadevi fair begins today
ಇಂಡಿ 18: ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ದಾನಮ್ಮದೇವಿ 4 ವರ್ಷದ ಜಾತ್ರಾ ಮಹೋತ್ಸವ ಇದೆ ದಿನಾಂಕ 19-11-2025 ರಿಂದ 20 -11-2025 ವರಿಗೆ ನಡೆಯುವದು ಎಂದು ಜಾತ್ರಾಸಮಿತಿಯ ಅಧ್ಯಕ್ಷ ಅನೀಲ ಪ್ರಸಾದ ಏಳಿಗೆ ತಿಳಿಸಿದ್ದಾರೆ. 19 ರಂದು ಬುಧವಾರ ಸಾಯಂಕಾಲ 4 ಗಂಟೆಗೆ ಬಾಲ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ 5 ಗಂಟೆಗೆ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಯಂಕಾಲ 6 ಗಂಟೆಗೆ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಗುರುವಾರ 20 ರಂದು ಚಟ್ಟಿ ಅಮಾವಾಸ್ಯೆ ಬೆಳಗ್ಗೆ 5 ಗಂಟೆಗೆ ದಾನಮ್ಮದೇವಿ ಮೂರ್ತಿಗೆ ರುದ್ರಾಭಿಷೇಕ ನಂತರ 9 ಗಂಟೆಗೆ ಪೆಟ್ರೋಲ್ ಪಂಪ ಹಿಂದುಗಡೆ ಸಿಂದಗಿ ರಸ್ತೆ ಬನ್ನಿಮಂಟಪದಿಂದ ಪಲ್ಲಕ್ಕಿ ಮಹೋತ್ಸವ ಶ್ರೀ ದಾನಮ್ಮದೇವಿ ಕಾಲೋನಿ ಸಿಂದಗಿ ರಸ್ತೆಯಿಂದ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ದಾನಮ್ಮದೇವಿ ದೇವಸ್ಥಾನಕ್ಕೆ ತಲುಪುವುದು.
ಅದೇ ದಿನ ಸಾಯಂಕಾಲ 4 ಗಂಟೆಗೆ ಧರ್ಮಸಭೆ ಹಾಗೂ ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ, ನಂತರ ಸಾಯಂಕಾಲ 8 ಗಂಟೆಗೆ ಬೀರೇಶ ವಾಲಿ ಕಲಾತಂಡ ವಿಜಯಪುರ ಇವರಿಂದ ಹಾಸ್ಯ ಹಾಗೂ ರಸಮಂಜರಿ ಕಾರ್ಯಕ್ರಮ ಜರಗುವವು. ಈ ಕಾರ್ಯಕ್ರಮಕ್ಕೆ ಅನೇಕ ಪೂಜ್ಯರು ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಪಾಲ್ಗೊಳ್ಳವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿರಶ್ಯಾಡ ಮಠದ ಅಭಿನವ ಮುರುಗೆಂದ್ರ ಶಿವಾಚಾರ್ಯರು, ಮಲ್ಲಿಕಾರ್ಜುನ ಬುರಕಡಲಿ, ಡಾ. ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ತಾಂಬೆ, ದಾನಯ್ಯ ಮಠಪತಿ, ರಾಜು ಬಾಂಬೆ, ಪ್ರಶಾಂತ ಗುಂದಗಿ, ರಾಜೇಶ್ವರಿ ಕ್ಷತ್ರಿ, ಶಶಿಕಲಾ ಬೆಟಿಗೇರಿ, ಪೂಜಾ ಏಳಗಿ, ಶ್ಯಾಮಲಾ ಬಗಲಿ, ಶೋಭಾ ದೇಸಾಯಿ, ಭಾರತಿ ಪತ್ರಿಮಠ, ಮಂಗಲಾ ಲಾಳಸಂಗಿ, ಶೀತಲ ನಾಡಗೌಡ, ಬೋರಮ್ಮ ಬಿರಾದಾರ, ಅನಿತಾ ಗಣಿ ಸೇರಿದಂತೆ ಮತ್ತಿತರರು ಇದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 