ಮಾಸ್ಕೊ, ಅ 19: ರಷ್ಯಾದ ಕ್ರಾಸ್ನೋಯಾರಸ್ಕ್ ವ್ಯಾಪ್ತಿಯ ಸೈಬೀರಿಯನ್ ಪ್ರಾಂತದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ 6 ಜನರು ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ. ಅಣೆಕಟ್ಟು ಕುಸಿತದಲ್ಲಿ ಒಟ್ಟು 20 ಜನರು ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದ ಬಳಿ 6 ಮಂದಿ ಮೃತಪಟ್ಟಿದ್ದಾರೆ. 10 ಜನರು ಕಣ್ಮರೆಯಾಗಿದ್ದಾರೆ ಎಂದು ತುರ್ತು ಸಚಿವಾಲಯ ಮಾಹಿತಿ ನೀಡಿದೆ. ತುರ್ತು ಸಚಿವಾಲಯದ ಪ್ರಾದೇಶಿಕ ಶಾಖೆಯ ಪ್ರಕಾರ, ಶನಿವಾರ 2 ಗಂಟೆಗೆ ಚಿನ್ನದ ಗಣಿಗಾರಿಕೆ ಕಂಪನಿಯೊಂದಕ್ಕೆ ಸೇರಿದ ಜಲಾಶಯದ ಅಣೆಕಟ್ಟಯ ಶ್ಚೆಟಿಂಕಿನೊ ವಸಾಹತು ಬಳಿ ಕುಸಿದಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಹತ್ತಿರದ ಪಟ್ಟಣವಾದ ಆರ್ಟಿಯೊಮೊವ್ಸ್ಕ್ನಿಂದ ಲಭ್ಯವಿರುವ ಎಲ್ಲ ತುರ್ತು ರಕ್ಷಣಾ ತಂಡಗಳನ್ನು ಘಟನೆಯ ಸ್ಥಳಕ್ಕೆ ರವಾನಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಲವತ್ತೊಂದು ಜನರು ಮತ್ತು 12 ಸಲಕರಣೆಗಳ ಘಟಕಗಳು ನಿರತರಾಗಿದ್ದವು. ಇದಲ್ಲದೆ, ರಷ್ಯಾದ ತುರ್ತು ಸಚಿವಾಲಯದ ಸೈಬೀರಿಯಾ ಪಾರುಗಾಣಿಕಾ ಕೇಂದ್ರದಿಂದ 200 ಸಿಬ್ಬಂದಿ, 5 ಮಿ -8 ಹೆಲಿಕಾಪ್ಟರ್ ಮತ್ತು ಮಿ -26 ಹೆಲಿಕಾಪ್ಟರ್ ಸೇರಿದಂತೆ ಏರ್ಮೊಬೈಲ್ ಘಟಕವನ್ನು ಈ ಪ್ರದೇಶಕ್ಕೆ ರವಾನಿಸಲಾಗಿದೆ.