ಬೆಂಗಳೂರು, ಜ.29 ಉಡುಪಿ ಜಿಲ್ಲೆ ಕಾಪುವಿನ ದಲಿತ ಸಮಾಜದ ಮುಖಂಡ ಶಂಕರ್ ಅವರ ಸಾವಿನ ನಂತರ ಅಂತ್ಯಕ್ರಿಯೆಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನೀಡದಿರುವ ಅಮಾನವೀಯ ವರ್ತನೆ ಖಂಡನೀಯ. 'ಹಿಂದುಗಳೆಲ್ಲ ಒಂದು' ಎಂದು ಘೋಷಣೆ ಕೂಗುತ್ತಿರುವ ಸಂಘ ಪರಿವಾರದ ಬಂದುತ್ವದ ವ್ಯಾಪ್ತಿಯಲ್ಲಿ ದಲಿತರು ಇಲ್ಲವೇ? ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯ ಹೈಕೋರ್ಟ್ ಬೀಸಿರುವ ಈ ಚಾಟಿ ಏಟಿನಿಂದಾದರೂ ಬುದ್ದಿ ಕಲಿಯಲಿ ಎಂದು ಆಶಿಸುತ್ತೇನೆ ಎಂದು ಮಾಧ್ಯಮವೊಂದರಲ್ಲಿ ಬಂದ "ಬಿಎಸ್‌ವೈ ಟಿಪ್ಪಣಿಗೆ ಹೈಕೋರ್ಟ್ ಬೇಸರ" ಎಂಬ ಸುದ್ದಿಯನ್ನು ಅಪ್‌ಲೋಡ್ ಮಾಡಿದ್ದಾರೆ.