ಜೋಹಾನ್ಸ್ ಬರ್ಗ್, ಮಾ 24,ಹಿರಿಯ ವೇಗದ ಬೌಲರ್ ಡೇಲ್ ಸ್ಟೇನ್ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾ 2021 ಸಾಲಿಗೆ ಪ್ರಕಟಿಸಿದ ರಾಷ್ಟ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಏತನ್ಮಧ್ಯೆ, ಬ್ಯೂರನ್ ಹೆಂಡ್ರಿಕ್ಸ್ ಇದೇ ಮೊದಲ ಬಾರಿ ರಾಷ್ಟ್ರೀಯ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಸೋಮವಾರ ಪ್ರಕಟಗೊಂಡ ನೂತನ ಗುತ್ತಿಗೆ ಪಟ್ಟಿಯಲ್ಲಿ ಆಲ್ ರೌಂಡರ್ ಡ್ವೇನ್ ಪ್ರೆಟೋರಿಯಸ್, ಬ್ಯಾಟ್ಸ್ ಮನ್ ರಾಸೀ ವ್ಯಾನ್ ಡೆರ್ ದಸೆನ್ ಮತ್ತು ವೇಗದ ಬೌಲರ್ ಆ್ಯನ್ರಿಚ್ ನಾರ್ತ್ಜೆ ಅವರ ಗುತ್ತಿಗೆಯನ್ನು ಉನ್ನತ ದರ್ಜೆಗೇರಿಸಲಾಗಿದೆ.ಆದರೆ ಆಟಗಾರ ಡೇಲ್ ಸ್ಟೇನ್ ಅವರನ್ನು ಗುತ್ತಿಗೆ ಒಪ್ಪಂದದಿಂದ ಕೈಬಿಡಲಾಗಿದೆ.
''ನಾವು 16 ಪುರುಷರ ಆಟಗಾರರು ಮತ್ತು 14 ಮಹಿಳಾ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಇದು ನಮ್ಮ ರಾಷ್ಟ್ರೀಯ ತಂಡಗಳನ್ನು ನಿರ್ವಹಿಸಲು ಸೂಕ್ತ ಸಂಖ್ಯೆ ಎಂದು ನಾವು ಭಾವಿಸುತ್ತೇವೆ," ಎಂದು ಸಿಎಸ್ಎ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಡಾ. ಜಾಕ್ವೆಸ್ ಫೌಲ್ ಹೇಳಿದ್ದಾರೆ.
ಪುರುಷರ ಗುತ್ತಿಗೆ ಒಪ್ಪಂದವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ , ದಕ್ಷಿಣ ಆಫ್ರಿಕಾದಲ್ಲಿನಡೆಯಲಿರುವ ಶ್ರೀಲಂಕಾ(ಟೆಸ್ಟ್), ಆಸ್ಟ್ರೇಲಿಯಾ (ಟೆಸ್ಟ್), ಪಾಕಿಸ್ತಾನ (ಟಿ20), ವೆಸ್ಟ್ ಇಂಡೀಸ್ (ಟಿ20) ಮತ್ತು ಶ್ರೀಲಂಕ ಪ್ರವಾಸವನ್ನು ಒಳಗೊಂಡಿರುತ್ತದೆ.
ನೂತನ ಗುತ್ತಿಗೆ ಪುರುಷರ ಆಟಗಾರರು:ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗರ್, ಬ್ಯೂರನ್ ಹೇಂಡ್ರಿಕ್ಸ್, ರೀಜಾ ಹೇಂಡ್ರಿಕ್ಸ್, ಕೇಶವ್ ಮಹಾರಾಜ್, ಏಡೆನ್ ಮರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ ಗಿಡಿ, ಆ್ಯನ್ರಿಚ್ ನೊರ್ತ್ಜೆ, ಆಂಡಿಲ್ ಫೆಹ್ಲುಖ್ವಾಯೊ, ಡ್ವೇನ್ ಪ್ರೆಟೋರಿಯಸ್, ಕಗಿಸೊ ರಬಾಡ, ತಬ್ರೈಜ್ , ಶಮ್ಸಿ, ರಾಸೀ ವ್ಯಾನ್ ಡೆರ್ ದುಸೆನ್.
ನೂತನ ಮಹಿಳಾ ಗುತ್ತಿಗೆ ಆಟಗಾರ್ತಿಯರು:ತ್ರಿಷಾ ಚೆಟ್ಟಿ, ನಡಿನ್ ಡೆ ಕ್ಲೆರ್ಕ್, ಮಿಗ್ನಾನ್ ಡು ಪ್ರೀಜ್, ಶಬ್ನಿಮ್ ಇಸ್ಮಾಯಿಲ್, ಸಿನಾಲೊ ಜಫ್ತಾ, ಮರಿಜಾನ್ನೆ ಕಪ್, ಆಯಬೊಂಗಾ ಖಾಕಾ, ಮಸಬಟಾ ಕ್ಲಾಸ್, ಲಿಜೆಲ್ ಲೀ ಸುನ್ ಲೂಯಸ್, ತುಮಿ ಶೆಖುಖುನೆ, ಚ್ಲೋಯೊ ಟ್ರಯಾನ್, ಡೇನ್ ವ್ಯಾನ್ ನಿಕೆರ್ಕ್ , ಲಾರಾ ವಾಲ್ವಾರ್ಡ್ತಿ.