ಅಪ್ಪ ಅಂದ್ರೆ ಭರವಸೆ, ವಿಶ್ವಾಸ: ಶಾಸಕ ಕುಮಠಳ್ಳಿ

ಅಥಣಿ 25: ಅಪ್ಪನ ವಿರೋಧದ ನಡುವೆಯೂ ತಮ್ಮಿಷ್ಟದ ಬದುಕನ್ನೇ ಆಯ್ಕೆ ಮಾಡಿಕೊಂಡ ಮಕ್ಕಳನ್ನು ಎಂದಿಗೂ ದ್ವೇಷದಿಂದ ನೋಡದವನು ಅಪ್ಪ. ಜೀವನ ಹಿಮ್ಮುಖವಾಗಿ ನಡೆಯುವುದಿಲ್ಲವಲ್ಲ ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡವನು! ತನ್ನಿಷ್ಟ ಮೀರಿ ಬದುಕು ಕಟ್ಟಿಕೊಂಡ ಮಕ್ಕಳು, ತನ್ನನ್ನು ಒಂಟಿಯಾಗಿ ತೊರೆದು ಹೋದಾಗಲೂ ಅದೇ ನಿಲರ್ಿಪ್ತ ಮುಖಭಾವದಲ್ಲೇ ಉಳಿದವನು ಅಪ್ಪ! ಅದೇ ಮಕ್ಕಳು ಕಷ್ಟದಲ್ಲಿದ್ದಾರೆ ಎಂದಾಗ ಸವೆದ ಚಪ್ಪಲಿಯಲ್ಲೇ ಓಡೋಡಿ ಬರುವ ಹುಚ್ಚು ಆಸಾಮಿ ಈ ಅಪ್ಪ! ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು. 

ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಟ್ರಸ್ಟ್ ಆಶ್ರಯದಲ್ಲಿ ಜನವರಿ 03 ರಂದು ನಡೆಯುವ ಅಪ್ಪನ ಜಾತ್ರೆ, ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ, ಸನ್ಮಾನ ಸ್ವೀಕರಿಸಿ ಮಾತನಾಡಿ, ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ ಅಪ್ಪನೆಂಬ ಪದಕ್ಕೂ ಇದೆ. ಅಪ್ಪನೆಂದರೆ ವಿಶ್ವಾಸ, ಭರವಸೆ. ಜೀವ ಕೊಟ್ಟು, ಜೀವನ ರೂಪಿಸಿದ ಅಪ್ಪ - ಅಮ್ಮಂದಿರ ದಿನ ಒಂದು ದಿನಕ್ಕೆ ಸೀಮಿತವಲ್ಲ. ಈ ಜಗತ್ತು ನಡೆಯುತ್ತಿರುವುದೇ ಅವರಿಂದ. ಆ ನಿಟ್ಟಿನಲ್ಲಿ ಟ್ರಸ್ಟ್ ಆಯೋಜಿಸಿರುವ ಇಂತಹ ಅಭೂತಪೂರ್ಣ ಅಪ್ಪನ ಜಾತ್ರೆಯ ಸಮಾರಂಭಕ್ಕೆ ಆಗಮಿಸುವುದಾಗಿ ತಿಳಿಸಿದರು.  

ಟ್ರಸ್ಟ್ ಅಧ್ಯಕ್ಷ ಮಹಾದೇವ ಬಿರಾದಾರ, ವೀರಣ್ಣ ವಾಲಿ, ಜಿಲ್ಲಾ ಪಂಚಾಯತ ಸದಸ್ಯ ಮುದಕಣ್ಣವರ, ಸದಾಸಿವ ಕೊಂಪಿ, ರಾಜು ಕುಮಠಳ್ಳಿ, ಶಸಿ ಸಾಳುವೆ, ಜಗದೇವ, ಪ್ರಕಾಶ ಚಣ್ಣನ್ನವರ ಸೇರಿದಂತೆ ಇತರರು ಇದ್ದರು.