ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜಿನಲ್ಲಿ ಡಿ.ಎಲ್.ಇಡಿ. ಪ್ರವೇಶಕ್ಕೆ ಆಹ್ವಾನ

ಧಾರವಾಡ.25 : ಶತಮಾನೋತ್ಸವ ಆಚರಿಸಿರುವ, ಸ್ತ್ರೀ ಶಿಕ್ಷಣ ಸಂವರ್ಧನೆಗೆ ನಿರಂತರ ಶ್ರಮಿಸುವ ಮೂಲಕ ಚಾರಿತ್ರಿಕ ಸಂಸ್ಥೆಯಾಗಿರುವ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜು (ಟಿಸಿಡಬ್ಲ್ಯೂ) ಎಂದೇ ಜನಪ್ರೀಯಗೊಂಡಿರುವ ಇಲ್ಲಿಯ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆಯಲ್ಲಿ  ಎರಡು ವರ್ಷಗಳ ಡಿಪ್ಲೋಮಾ ಇನ್ ಎಲಿಮೆಂಟರಿ ಎಜ್ಯುಕೇಷನ್ (ಡಿ.ಎಲ್.ಇಡಿ) ವೃತ್ತಿಪರ ಕೋಸರ್್ಗೆ ನೇರ ಪ್ರವೇಶಕ್ಕೆ ಅವಕಾಶ ನೀಡಿ ಅಜರ್ಿಗಳನ್ನು ಆಹ್ವಾನಿಸಲಾಗಿದೆ.

     ಡಾ.ಮಲ್ಲಿಕಾಜರ್ುನ ಮನಸೂರ ಕಲಾಭವನದ ಎದುರಿಗೆ ನಗರದ ಹೃದಯ ಸ್ಥಾನದಲ್ಲಿ ವಿಶಾಲ ಆವರಣದಲ್ಲಿ ಸುಸಜ್ಜಿತ ಕಟ್ಟಡ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿರುವ ಶಿಕ್ಷಕಿಯರ ಸಕರ್ಾರಿ ತರಬೇತಿ ಸಂಸ್ಥೆಯಲ್ಲಿ ಕನ್ನಡ ಮತ್ತು ಉದರ್ು ಮಾಧ್ಯಮದಲ್ಲಿ ವ್ಯಾಸಂಗಕ್ಕೆ ಅವಕಾಶವಿದ್ದು, ಒಟ್ಟು ಡಿ.ಎಲ್.ಇಡಿ ತರಬೇತಿಯ 100 ಸೀಟುಗಳ ಲಭ್ಯತೆ ಇದ್ದು, ಈ ಬಾರಿ ಇಂಗ್ಲೀಷ್ ಮಾಧ್ಯಮದಲ್ಲಿಯೂ ಪ್ರವೇಶ ನೀಡಲಾಗುವುದು. ಆಫ್ಲೈನ್ದಲ್ಲಿ ನೇರ ಪ್ರವೇಶ ನೀಡಲಾಗುವುದು. 

     ಪಿ.ಯು.ಸಿ ದ್ವಿತೀಯ ವರ್ಷದಲ್ಲಿ 45% ಅಂಕ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ದಿವ್ಯಾಂಗ (ಪಿ.ಎಚ್) ವಿದ್ಯಾಥರ್ಿಗಳು ಮತ್ತು 50% ಅಂಕ ಪಡೆದ ಸಾಮಾನ್ಯ ಹಾಗೂ ಇತರೇ ಕೆಟಗರಿಯ ವಿದ್ಯಾಥರ್ಿಗಳು ತರಬೇತಿಗೆ ಪ್ರವೇಶ ಕೋರಲು ಸಂಸ್ಥೆಯನ್ನು ನೇರವಾಗಿ ಸಂಪಕರ್ಿಸಬಹುದು. ಜೊತೆಗೆ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯಥರ್ಿಗಳು ಸಹ ಅಜರ್ಿ ಸಲ್ಲಿಸಬಹುದು. ಪ್ರವೇಶಕ್ಕಾಗಿ ಕೊನೆಯ ಮೇ. 28ರಂದು ಇರುತ್ತದೆ.

     ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಉಚಿತ ವಸತಿ ನಿಲಯವಿದೆ. ಕಂಪ್ಯೂಟರ್ ಶಿಕ್ಷಣ, ಟಿ.ಇ.ಟಿ. ಮತ್ತು ಸಿ.ಇ.ಟಿ. ಉಚಿತ ತರಬೇತಿ, ಮಾರ್ಗದರ್ಶನ ನೀಡಲಾಗುವುದು. ತರಬೇತಿ ವಿದ್ಯಾಲಯದಲ್ಲಿ ಗ್ರಂಥಾಲಯ ಹಾಗೂ ವಿವಿಧ ವಿದ್ಯಾಥರ್ಿ ವೇತನ ಸೌಲಭ್ಯಗಳನ್ನು ಪಡೆಯಲು ತ್ವರಿತವಾಗಿ ಸಂಪಕರ್ಿಸಿಬಹುದಾಗಿದೆ. ಡಿ.ಎಲ್.ಇಡಿ ಮತ್ತು ಪಿ.ಯು.ಸಿ ತರಬೇತಿ ಪೂರೈಸಿದ ವಿದ್ಯಾಥರ್ಿಗಳು 1 ನೇ ತರಗತಿಯಿಂದ 5ನೇ ತರಗತಿ ಕಲಿಸಲು ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಅಜರ್ಿ ಸಲ್ಲಿಸಬಹುದು. ಬಿ.ಎಸ್.ಸಿ/ಬಿ.ಎ ಮತ್ತು ಡಿ.ಎಲ್.ಇಡಿ ತರಬೇತಿ ಪೂರೈಸಿದ ವಿದ್ಯಾಥರ್ಿಗಳು 6 ರಿಂದ 8 ನೇ ತರಗತಿಗೆ ಕಲಿಸಲು ಪದವೀಧರ ಪ್ರಾಥಮಿಕ ಶಿಕ್ಷಕ ಹುದ್ದೆಗೆ ಅಜರ್ಿ ಸಲ್ಲಿಸಬಹುದು. ಟಿ.ಇ.ಟಿ. ಪರೀಕ್ಷೆ ಅರ್ಹತೆ ಎರಡಕ್ಕೂ ಅವಶ್ಯಕತೆ ಇದೆ.  ಪ್ರವೇಶ ಪಡೆಯಲು ಅಭ್ಯಥರ್ಿಗಳು 9448863734, 9480629832, 9538420091, 7975851445 ಮೊಬೈಲ್ ಸಂಖ್ಯೆಗಳಿಗೆ ಸಂಪಕರ್ಿಸಿ ಮಾಹಿತಿ ಪಡೆಯಬೇಕೆಂದು ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.