ಅನರ್ಹ ಶಾಸಕ ಸುಧಾಕರ್ ಸೋಲಿಸಿ: ಡಿಕೆ ಶಿವಕುಮಾರ್, ಕೃಷ್ಣ ಭೈರೇಗೌಡ ಕರೆ

ಚಿಕ್ಕಬಳ್ಳಾಪುರ, ನ 18 :     ಅಕ್ರಮ ಹಣಕಾಸು ಪ್ರಕರಣದಲ್ಲಿ ಜೈಲು ಸೇರಿ ವಾಪಸ್ಸಾದ ಬಳಿಕ ರಾಜಕಾರಣದಲ್ಲಿ ಸಕ್ರಿಯವಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಂಜಿನಪ್ಪ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ.  

ಕಾಂಗ್ರೆಸ್ ಅಭ್ಯರ್ಥಿ ಅಂಜಿನಪ್ಪ ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಂಜನಪ್ಪ ಮಾತ್ರ ಅಭ್ಯರ್ಥಿಯಾಗಿಲ್ಲ. ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಕೂಡ ಅಭ್ಯರ್ಥಿಗಳೇ. ಪಕ್ಷಕ್ಕೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ. ಅಂತಹವರಿಗೆ ನೀವು ಶಿಕ್ಷೆ ನೀಡಬೇಕು ಎಂದು ಮತದಾರರಿಗೆ ಕರೆ ನೀಡಿದರು. 

'50 ದಿನಗಳ ಸೆರೆವಾಸದ ನಂತರ ಮೊದಲ ಬಾರಿಗೆ ಚಿಕ್ಕಬಳ್ಳಾಪುರಕ್ಕೆ ಬಂದು ಸಭೆ ನಡೆಸುತ್ತಿದ್ದೇನೆ. ನನ್ನ ಆರೋಗ್ಯ ಉತ್ತಮವಾಗಿಲ್ಲ. ಆದರೂ ನಿಮ್ಮ ಪ್ರೀತಿ, ಪೂಜೆ, ಪ್ರಾರ್ಥನೆ, ತ್ಯಾಗ ನನ್ನನ್ನು ಇಲ್ಲಿವರೆಗೆ ಬರುವಂತೆ ಮಾಡಿದೆ ಎಂದರು.  

ನಾನು ಇಲ್ಲಿಗೆ ಬರುವಾಗ ದಾರಿಯಲ್ಲಿ ಸುಮಾರು ದೇವಸ್ಥಾನಗಳನ್ನು ನಾನು ನೋಡಿಕೊಂಡು ಬಂದೆ. ರಾಮನ ತಂದೆ ದಶರಥ ಮಹರಾಜನ ದೇವಾಲಯವನ್ನು ನಾನು ಎಲ್ಲಿಯೂ ನೋಡಿಲ್ಲ. ಆದರೆ ರಾಮನ ಭಂಟ ಆಂಜನೇಯನ ದೇವಾಲಯ ಎಲ್ಲಾ ಕಡೆ ಇವೆ. ಆಂಜನೇಯ ಯಾರಪ್ಪಾ ಅಂದರೆ ಸಮಾಜ ಸೇವೆ ಮಾಡುತ್ತಾ, ಸಮಾಜಕ್ಕೊಸ್ಕರ ತ್ಯಾಗ ಮಾಡುವ, ರಕ್ಷಿಸುವವನು. ಹೀಗಾಗಿ ಜನ ಕೂಡ ಆಂಜನೇಯನನ್ನು ಪ್ರಾಥರ್ಿಸುತ್ತಾರೆ. ಅದೇ ರೀತಿ ಇವತ್ತು ಮತದಾರರು ನಮ್ಮ ಈ ಆಂಜನೇಯನಿಗೆ ಆಶೀವರ್ಾದ ಮಾಡಬೇಕು ಎಂದರು.  

ಯಾರಿಗೆ ದ್ರೋಹ ಮಾಡಿದರೂ ಕ್ಷಮೆ ಇದೆ. ಆದರೆ ಹೆತ್ತ ತಾಯಿಗೆ ದ್ರೋಹ ಮಾಡಿದರೆ ಕ್ಷಮೆ ಇಲ್ಲ ಎಂದು ಈಗಷ್ಟೇ ನಮ್ಮ ಕೃಷ್ಣಭೈರೇಗೌಡರು ಹೇಳಿದ್ದಾರೆ. ಅಧಿಕಾರ ಇದ್ದಾಗ ಯಾರು ಏನು ಮಾಡಿದರೂ ಎಂಬುದಕ್ಕಿಂತ ಅಧಿಕಾರ ಇಲ್ಲದಿದ್ದಾಗಲೂ ಯಾರು ಜನರಿಗಾಗಿ ಶ್ರಮಿಸಿ, ತ್ಯಾಗ ಮಾಡಿ ಸಮಾಜದ ಪರವಾಗಿ ಕೆಲಸ ಮಾಡುತ್ತಾರೆ ಎಂಬುದು ಬಹಳ ಮುಖ್ಯ. ಇಲ್ಲಿ ಹುಡುಗರು ಅಕ್ಕಿ ಆಂಜಿನಪ್ಪ ಎಂದು ಇವರನ್ನು ಕರೆಯುತ್ತಾರೆ. ಬಡವರಿಗೋಸ್ಕರ ಅನ್ನವನ್ನು ಕೊಟ್ಟಂತಹ ಆಂಜಿನಪ್ಪಗೆ ಆಶೀವರ್ಾದ ಮಾಡಿ ಎಂದು ಕೇಳಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಇಷ್ಟು ದಿನ ಹೇಗೆ ನಿಮ್ಮ ಪ್ರೀತಿ ಅಭಿಮಾನ ತೋರಿಸುತ್ತಿದ್ದೀರಿ ಅದೇ ರೀತಿ ಮುಂದಿನ ದಿನಗಳಲ್ಲಿ ತೋರಿಸುವ ವಿಶ್ವಾಸ ಇದೆ ಎಂದರು.  

ನೀವು ಮತ ಹಾಕುವಾಗ ಬರುವ ಸದ್ದು ದೆಹಲಿಗೆ ಕೇಳಿಸಬೇಕು. ಪಕ್ಷದ್ರೋಹ ಮಾಡಿದವರನ್ನು ಮನೆಯಲ್ಲಿ ಕೂರುವಂತಹ ಶಿಕ್ಷೆ ನೀಡಬೇಕು. ಈ ಸಕರ್ಾರ ರಚನೆ ಆದ ಬಗ್ಗೆ ಯಡಿಯೂರಪ್ಪ ಅವರು ತಮ್ಮ ನುಡಿಮುತ್ತುಗಳಲ್ಲಿ ಹೇಳಿದ್ದಾರೆ. ಈ ಹಿಂದೆ ಇಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ಪರಮೇಶ್ವರ್ ಅವರು ಏನು ಮಾತುಕೊಟ್ಟಿದ್ದರು, ದೇಶಪಾಂಡೆ ಅವರು ಏನು ಹೇಳಿದ್ದರು, ನಂತರ ಸಿದ್ದರಾಮಯ್ಯ ಹಾಗೂ ಮಹದೇವಪ್ಪನವರು ಯಾವರೀತಿ ಈ ಗಿಳಿಯನ್ನು ಸಾಕಿದ್ದರು. ನಂತರ ಈ ಗಿಳಿ ಏನಾಯ್ತು ಅಂತಾ ಅವರು ಬಂದು ನಿಮಗೆ ವಿವರಿಸುತ್ತಾರೆ. ಅವರು ಈ ವಿಚಾರ ತಿಳಿಸದೇ ಈ ಚುನಾವಣೆ ಮುಕ್ತವಾಗುವುದಿಲ್ಲ ಎಂದು ಹೇಳಿದರು.   

ಇವತ್ತು ನಿಮ್ಮ ಸಂಕಲ್ಪ ಒಂದೇ ಆಗಿರಬೇಕು. ಈ ದೇವರ ಸನ್ನಿದಿ ಬಳಿ ನಾನು ನಿಂತು ಮಾತನಾಡುತ್ತಿದ್ದೇನೆ. ಆಂಜಿನಪ್ಪ ಅವರ ಹಸ್ತದ ಗುರುತಿಗೆ ಮತ ಹಾಕುವುದು, ಅವರನ್ನು ವಿಧಾನಸಭೆಗೆ ಕಳುಹಿಸುವುದೊಂದೇ ನಿಮ್ಮ ಗುರಿಯಾಗಿರಬೇಕು. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ ನಿಮಗೆ ದ್ರೋಹ ಮಾಡಿದವರಿಗೆ ಹೇಗೆ ಶಿಕ್ಷೆ ನೀಡುತ್ತೀರೋ ಅದೇ ರೀತಿ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಶಿಕ್ಷೆ ನೀಡಬೇಕು ಎಂದರು.  

 ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಧರ್ಮ ಯುದ್ದವಾಗಿದ್ದು ಧರ್ಮ ಹಾಗೂ ಅಧರ್ಮ ನಡುವೆ ನಡೆಯುತ್ತಿರುವ ಚುನಾವಣೆ. ಇಲ್ಲಿ ಅಸತ್ಯ- ಅಧರ್ಮವನ್ನು ಅನುಸರಿಸಿದ ಅನರ್ಹ ಶಾಸಕರಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದರು.  

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನಿಂದ ಎಲ್ಲ ಅಧಿಕಾರ, ಹಣ ಪಡೆದು ಇದೀಗ  ಅಧಿಕಾರ ದಾಹದಿಂದ ಕೋಮುವಾದಿ ಬಿಜೆಪಿಗೆ ಸೇರಿರುವವರನ್ನು ಮನೆಗೆ ಕಳುಹಿಸಿ. ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಆನೈತಿಕ ರಾಜಕಾರಣಕ್ಕೆ ಮುಂದಾಗಿದೆ ಎಂದರು.  

ಬಿಜೆಪಿ ನಾಯಕರಿಗೆ ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ವಾಮಮಾರ್ಗದಲ್ಲಿ ಈ ಸಕರ್ಾರ ಅಧಿಕಾರಕ್ಕೆ ಬಂದಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನ ಸ್ವಾಭಿಮಾನಿಗಳಾಗಿದ್ದು ಬಿಜೆಪಿಗೆ ಮಾರಾಟವಾಗಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಗೆ ತಕ್ಕಪಾಠ ಕಲಿಸಬೇಕು ಎಂದರು.  

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶಿವಶಂಕರರೆಡ್ಡಿ, ಶಾಸಕ ವಿ.ಮುನಿಯಪ್ಪ, ಅಭ್ಯರ್ಥಿ ನಂದಿ ಅಂಜಿನಪ್ಪ, ಜಿ.ಎಚ್.ನಾಗರಾಜ್, ರಮೇಶ್, ನವೀನ್ ಕುಮಾರ್ ಮತ್ತಿತರರು ಇದ್ದರು.