ಡಿ.ಕೆ.ಶಿವಕುಮಾರ ಪ್ರತಿಜ್ಞೆ ವಿಧಿ ಸ್ವೀಕಾರ: ಕಾರ್ಯಕರ್ತರು ಸಂಭ್ರಮಾಚರಣೆ

ಲೋಕದರ್ಶನ ವರದಿ

ಚಿಕ್ಕೋಡಿ ಜು. 2: ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಪ್ರತಿಜ್ಞೆ ವಿಧಿ ಸ್ವೀಕರಿಸುತ್ತಿದ್ದಂತೆಯೇ ಚಿಕ್ಕೋಡಿ ನಗರದಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿ ಬೆಂಬಲ ಸೂಚಿಸಿದರು.

ಚಿಕ್ಕೋಡಿ ಇಂದಿರಾ ನಗರದ ಶಾಸಕ ಗಣೇಶ ಹುಕ್ಕೇರಿ ನಿವಾಸದಲ್ಲಿ ಡಿಜಿಟಲ್ ಝೂಮ್ ಕಾನ್ಫರೆನ್ಸ್ ಮುಖಾಂತರ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ, ಕಾಯರ್ಾಧ್ಯಕ್ಷರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ವೀಕ್ಷಿಸಿದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ ಕುಲಕಣರ್ಿ ಹಾಗೂ ಪುರಸಭೆ ಸದಸ್ಯ ಸಾಭೀರ ಜಮಾದಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವೀಧಾನ ಪೀಠಿಕೆ ಓದಿದರು. 

ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗದ ಹತ್ತಾರು ಕಡೆಗಳಲ್ಲಿ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಅಂತರದ ಹಿನ್ನಲ್ಲೆಯಲ್ಲಿ ಒಂದೊಂದು ಕಾರ್ಯಕ್ರಮದಲ್ಲಿ ನಗದಿತ ಜನ ಸೇರಿ ಟಿವಿ ಹಾಗೂ ಎಲ್ಇಡಿ ಮೂಲಕ ನೇರವಾಗಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ವೀಕ್ಷಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಮೀಟಿ ಸದಸ್ಯರಾದ ರವಿ ಮಿಜರ್ೆ, ಪ್ರಭಾಕರ ಕೋರೆ, ಎಚ್.ಎಸ್.ನಸಲಾಪೂರೆ, ರಾಮಾ ಮಾನೆ, ವರ್ಧಮಾನ ಸದಲಗೆ, ಗುಲಾಬ ಹುಸೇನ್ ಬಾಗವಾನ, ರಾಜು ಗುಲಗುಂಜಿ, ಬಾಬು ಸಮತಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.