ಮಂಗಳೂರು , ಮಾ.18 : ಕೊರೋನಾ ವೈರಸ್ ವ್ಯಾಪಿಸುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಕಚೇರಿಗಳ ಸಾರ್ವಜನಿಕ ಸೇವೆಗಳನ್ನು ನಿರ್ಬಂಧಿಸಿ ದ.ಕ.ಜಿಲ್ಲಾಧಿಕಾರಿ ಸಿಂದೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.ಸಾರ್ವಜನಿಕ ರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಪಡೆಯುವಂತಹ ಹಾಗೂ ಜನ ಹೆಚ್ಚು ಸೇರುವಂತಹ ಇಲಾಖೆಗಳ ಸೇವೆಯನ್ನು ಮಾ.31 ರ ತನಕ ನಿರ್ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಸಾರಕಾರಿ ಕಚೇರಿಗಳಿಗೆ ರಜೆ ನೀಡಲಾಗಿಲ್ಲ , ಆದರೆ ಅಲ್ಲಿ ಲಭಿಸುವ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮುಖ್ಯವಾಗಿ ಕಂದಾಯ ಇಲಾಖೆಯ ಸೇವೆಗಳು , ಆಧಾರ್ ತಿದ್ದುಪಡಿ , ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹೊಸ ವಾಹನಗಳ ನೋಂದಣಿ , ಹೊಸ ಡ್ರೈವಿಂಗ್ ಲೈಸನ್ಸ್ , ಉಪ ನೋಂದಣಿ ಕಚೇರಿಯ ಆಸ್ತಿ ನೋಂದಣಿ , ಸ್ಥಳೀಯ ಆಡಳಿತ ಕಚೇರಿಯ ವಿವಿಧ ಸೇವೆಗಳು , ಲೈಸನ್ಸ್ ನೀಡಿಕೆ ಇತ್ಯಾದಿ ಸೇವೆಗಳು ಮಾರ್ಚ್ 31 ರ ತನಕ ಲಭ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.