ಕೊವಿದ್-19: ಇಟಲಿಯಲ್ಲಿ ಸಾವಿನ ಸಂಖ್ಯೆ 109ಕ್ಕೆ ಏರಿಕೆ, 3,000 ಕ್ಕೂ ಹೆಚ್ಚು ಜನರಿಗೆ ಸೋಂಕು

ರೋಮ್, ಮಾರ್ಚ್ 5, ಇಟಲಿಯಲ್ಲಿ ಮಾರಣಾಂತಿಕ ಕೊರೊನಾವೈರಸ್(ಕೊವಿದ್-19)ನಿಂದ ಸಾವನ್ನಪ್ಪಿದವರ ಸಂಖ್ಯೆ 109 ಕ್ಕೆ ಏರಿದ್ದು, ಒಟ್ಟು 3,089 ಜನರು ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 24 ತಾಸಿನಲ್ಲಿ 116 ಜನರು ಚೇತರಿಸಿಕೊಂಡಿದ್ದಾರೆ, ಇದರೊಂದಿಗೆ ಒಟ್ಟು 276 ಜನರು ಚೇತರಿಸಿಕೊಂಡಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 28 ರಿಂದ 107 ಕ್ಕೆ ಏರಿದೆ ಎಂದು ರಾಷ್ಟ್ರೀಯ ನಾಗರಿಕ ಸಂರಕ್ಷಣಾ ಸಂಸ್ಥೆ ಮುಖ್ಯಸ್ಥ ಏಂಜೆಲೊ ಬೊರೆಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ .ಮಾರಕ ವೈರಸ್ ನಿಂದ ಚೇತರಿಸಿಕೊಂಡವರು, ಮೃತಪಟ್ಟವರು ಮತ್ತು ಸೋಂಕು ಪೀಡಿತ ಜನರ ಸಂಖ್ಯೆ 3,089 ತಲುಪಿದೆ ಎಂದು ಬೊರೆಲ್ಲಿ ಹೇಳಿದ್ದಾರೆ.  ಉತ್ತರ ಲೊಂಬಾರ್ಡಿ ಪ್ರದೇಶದಲ್ಲಿ ಹೆಚ್ಚಿನ ಸೋಂಕುಗಳು (1,497) ಮತ್ತು ಸಾವುಗಳು (73) ಸಂಭವಿಸಿದ್ದು, ಫೆ 21 ರಂದು ಸಾಂಕ್ರಾಮಿಕ ರೋಗ  ಮೊದಲು ಸ್ಫೋಟಗೊಂಡಿದೆ. ಉತ್ತರ ಎಮಿಲಿಯಾ-ರೊಮಾಗ್ನಾ ಪ್ರದೇಶದಲ್ಲಿ 516 ಪ್ರಕರಣಗಳು ಮತ್ತು 22 ಸಾವುಗಳು ವರದಿಯಾಗಿದ್ದರೆ, ನಂತರದ ಸ್ಥಾನದಲ್ಲಿದೆ.  ವೆನೆಟೊದಲ್ಲಿ 345 ಪ್ರಕರಣಗಳು ವರದಿಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ಸಂರಕ್ಷಣಾ ಇಲಾಖೆ ತಿಳಿಸಿದೆ.