ಬಾಗಲಕೋಟೆ27: ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳಿಗೆ ತುತರ್ಾಗಿ ನಿವೇಶನ ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 183 ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 142 ಅಂಗನವಾಡಿ ಕೇಂದ್ರಗಳಿಗೆ ನಿವೇಶನವಿರುವದಿಲ್ಲ. ಈ ಪೈಕಿ 8 ಅಂಗನವಾಡಿಗಳಿಗೆ ನಿವೇಶನ ಪಡೆಯಲಾಗಿದ್ದು, ಉಳದಿ 134 ಅಂಗನವಾಡಿಗಳಿಗೆ ಆಯಾ ತಾಲೂಕಿನ ಪ್ರತಿ ಶಿಶು ಅಭಿವೃದ್ದಿ ಅಧಿಕಾರಿಗಳು ಪ್ರತಿ ತಿಂಗಳು ತಲಾ 5 ರಂತೆ ಒಟ್ಟು 3 ತಿಂಗಳಲ್ಲಿ 90 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಗುರುತಿಸಿ ಆರ್.ಟಿ.ಸಿಯೊಂದಿಗೆ ಮುಂದಿನ ಸಭೆಯಲ್ಲಿ ವರದಿಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಾಮನಿದರ್ೇಶಿತ ಸದಸ್ಯರಾದ ಬಾಗವಾನ ಅವರು ಹುನಗುಂದ ತಾಲೂಕಿನ ವಿನಾಯಕ ನಗರ, ಇಲಕಲ್ಲ ಪಟ್ಟಣದ ವಿನಾಯಕ ನಗರ ವಾರ್ಡ ನಂ.6ರಲ್ಲಿ ಹಾಗೂ ರೇಷ್ಮಿ ಅವರು ಕಿರಸೂರಿನಲ್ಲಿಅಲ್ಪಸಂಖ್ಯಾತರ ಸಮುದಾಯ ಹೆಚ್ಚಿಗಿದ್ದು, ಹೊಸ ಅಂಗನವಾಡಿ ಕೇಂದ್ರ ಅವಶ್ಯವಿರುವ ಬಗ್ಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಪ್ರಸ್ತಾವನೆ ನೀಡಿರುವುದಾಗಿ ಸಭೆಗೆ ತಿಳಿಸಿದಾಗ ಉದರ್ು ಅಂಗನವಾಡಿ ಪ್ರಸ್ತಾವನೆ ಜೊತೆಗೆ ಸೇರಿಸಿ ಸಲ್ಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿಗಳು ತಿಳಿಸಿದರು.
ಕೆಲವು ಕಡೆ ಪೇಶ ಇಮಾಮರ ಬದಲಾಗಿ ಮಸ್ಜಿದ್ ಅಧ್ಯಕ್ಷರಿಗೆ ಗೌರವಧನ ಜಮೆಯಾಗುತ್ತಿರುವ ಬಗ್ಗೆ ಕ್ರಮವಹಿಸಲು ನಾಮನಿದರ್ೇಶಿತ ಸದಸ್ಯರಾದ ಬಾಗವಾನ ಮತ್ತು ರೇಷ್ಮಿ ಅವರು ವಕ್ಪ್ ಅಧಿಕಾರಿಗಳಿಗೆ ತಿಳಿಸಿದರು. ಇಲ್ಲಿಯವರೆಗೆ ಕ್ರಮವಹಿಸಿರುವದಿಲ್ಲವೆಂದು ಸಭೆಗೆ ತಿಳಿಸಿದಾಗ ವಕ್ಪ್ ಅಧಿಕಾರಿಗಳ ಕಾರ್ಯವೈಖರಿಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ತುತರ್ು ಕ್ರಮವಹಿಸಬೇಕು ಹಾಗೂ ಜಿಲ್ಲೆಯಲ್ಲಿ ಬಾಕಿ ಇರುವ ವಕ್ಪ್ ಸವರ್ೆ ಕಾರ್ಯಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರಸಕ್ತ ಸಾಲಿಗೆ ಟ್ಯಾಕ್ಸಿ ಮತ್ತು ಗೂಡ್ಸ್ ವಾಹನ ಯೋಜನೆಗೆ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ನಾಮನಿದರ್ೇಶಿತ ಸದಸ್ಯರು ಜಿಲ್ಲಾಧಿಕಾರಿಗಳಲ್ಲಿ ಕೋರಿದಾಗ ಈ ಕುರಿತು ಕೇಂದ್ರ ಕಚೇರಿಗೆ ಪತ್ರ ಬರೆಯಲು ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಸೌಲಭ್ಯಗಳಿಗೆ ಅಜರ್ಿಗಳು ಪ್ರಾರಂಭಿಸಿರದ ಬಗ್ಗೆ ಸಭೆಯಲ್ಲಿ ತಿಳಿಸಿದಾಗ ಕೇಂದ್ರ ಕಚೇರಿಯಿಂದ ಸೂಕ್ತ ನಿದರ್ೇಶನ ಬಂದ ಬಳಿಕ ಪ್ರಾರಂಭಿಸುವುದಾಗಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಒಟ್ಟು 3479 ಅಲ್ಪಸಂಖ್ಯಾತರ ವಿದ್ಯಾಥರ್ಿಗಳು ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದು, ಪ್ರಸಕ್ತ ಸಾಲಿಗೆ ದಾಖಲಾತಿ ಪ್ರಗತಿಯಲ್ಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ತಿಳಿಸಿದರೆ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಕಳೆದ ಸಾಲಿಗೆ 122 ಹಾಗೂ ಪ್ರಸಕ್ತ ಸಾಲಿಗೆ 11 ಅಲ್ಪಸಂಖ್ಯಾತರ ಅಭ್ಯಥರ್ಿಗಳು ಉದ್ಯೋಗಕ್ಕೆ ನೊಂದಾಯಿಸಕೊಂಡಿರುತ್ತಾರೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಕೃಷಿ ಇಲಾಖೆಯ ಉಪನಿದರ್ೇಶಕ ಎಸ್.ಬಿ.ಕೊಂಗವಾಡ, ತೋಟಗಾರಿಕೆ ಇಲಾಖೆಯ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ ಸೇರಿದಂತೆ ನಾಮನಿದರ್ೇಶಿ ಸದಸ್ಯರು ಉಪಸ್ಥಿತರಿದ್ದರು.