ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕಾರ್ಯಕ್ರಮವನ್ನು ಚಾಲನೆ ನೀಡಿದ ಜಿಲ್ಲಾಧಿಕಾರಿ
DC launches competitive exam preparation program
ವಿಜಯಪುರ 25: ವಿಜಯಪುರ ಜಿಲ್ಲೆಯಲ್ಲಿ ಸರಕಾರಿ ಉದ್ಯೋಗದ ಅಭಿಲಾಷೆಯಿಂದ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ? ಒಂದು ದಿನದ ಕಾರ್ಯಾಗಾರ ವನ್ನು ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಆನಂದ ಕೆ ರವರು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ ಯವರು ಮಾತನಾಡಿ ವಿದ್ಯಾರ್ಥಿಗಳಿಗೆಗಿಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನ ಎದುರಿಸಲೇಬೇಕಾಗಿದೆ. ಎಷ್ಟೇ ಕಷ್ಟ ಬಂದರು ಸಾಧಿಸುತ್ತೇನೆ ಎನ್ನುವ ಛಲ ಎಲ್ಲಾ ವಿದ್ಯಾರ್ಥಿಗಳಿಗೆ ಬರಬೇಕಾಗಿದೆ, ನೀವೂ ಈ ಪರೀಕ್ಷೆ ವೇಳೆ ತಪ್ಪಸಿನಹಾಗೆ ಕಠಿಣ ಪರಿಶ್ರಮ ವಹಿಸಿ ಹೊರ ಜಗತ್ತಿನ ಸಹವಾಸ ಬಿಟ್ಟು ನಿಷ್ಠೇಯಿಂದ ಅಭ್ಯಾಸ ಮಾಡಿದ್ದೆ ಆದರೆ, ಜೀವನದಲ್ಲಿ ಒಳ್ಳೆಯ ಹುದ್ದೆಯನ್ನು ಪಡೆದು ನಿಮ್ಮ ಪಾಲಕರು, ನಿಮ್ಮ ಗ್ರಾಮಸ್ಥರಿಗೆ ಮಾತ್ರವಲ್ಲದೇ ನಿಮ್ಮ ಜಿಲ್ಲೆಗೆ ಒಳ್ಳೆಯ ಹೆಸರು ತಂದಾಗುತ್ತದೆ ಎಂದರು.
ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಪ್ರಾಸ್ತಾವಿಕ ಶ್ರೀನಾಥ್ ಪೂಜಾರಿ ಅವರು ಮಾತನಾಡಿ ವಸತಿ ನಿಲಯಗಳು ಊಟದ ಕೇಂದ್ರ ಮಾತ್ರ ಆಗದೆ ಶಿಕ್ಷಣದ ಶೈಕ್ಷಣಿಕ ಕೇಂದ್ರಗಳಾಗಿ ಮಾರ್ಾಡಾಗಬೇಕಾಗಿದೆ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಘಟನೆ ಅಡಿಯಲ್ಲಿ ಈ ರೀತಿಯ ಸರ್ವ ಸಮಾಜದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜನೆ ಮಾಡಿ ಒಳ್ಳೆಯ ಹುದ್ದೆ ಪಡೆಯಲಿ ಎಂಭ ಮಹಾದಾಶೆ ನಮ್ಮದು ಎಂದರು. ಈ ಕಾರ್ಯಕ್ರಮದ ಉಪನ್ಯಾಸಕರಾದ ಆಗಮಿಸಿದ ಜಿಲ್ಲೆಯ ಪ್ರಖ್ಯಾತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ಶರಣಯ್ಯ ಭಂಡಾರಿಮಟ್ಟವರು ಉಪನ್ಯಾಸ ನೀಡಿದರು. ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ವಿಜಯಪುರ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಜೆ ಇಂಡಿ, ಬ.ಬಾಗೇವಾಡಿಯ ಸಮಾಜ ಕಲ್ಯಾಣ ಇಲಾಕೆಯ ಸಹಾಯಕ ನಿರ್ದೇಶಕರಾದ ಮಂಜು ಹಿರೇಮನಿ, ಇಂಡಿ ಸಮಾಜ ಕಲ್ಯಾಣ ಇಲಾಕೆಯ ಸಹಾಯಕ ನಿರ್ದೇಶಕರಾದ ಉಮೇಶ ಲಮಾಣಿ ಸೇರಿದಂತೆ ಅನೇಕ ಗಣ್ಯರು ಇದ್ದರು ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಮುಖಂಡರಾದ ಅಕ್ಷಯ್ ಕುಮಾರ ಅಜಮನಿ, ಉಪಾಧ್ಯಕ್ಷರಾದ ಮಹಾದೇವ ಚಲವಾದಿ, ಸಂದೇಶ ಕುಮಟಗಿ,, ಯಾಷಿನ್, ರಾಹುಲ್, ಪಂಡಿತ್, ಯುವರಾಜ್, ಶಂಕರ್, ತುಳಶಿರಾಮ್, ಪ್ರತಾಪ್, ಭೀಮು, ಪೂಜಾ, ಪ್ರೇಮಾ, ಶಿಲ್ಪಾ, ಸೌಮ್ಯ, ಮುಂತಾದ ಪದಾಧಿಕಾರಿಗಳು, ಮತ್ತು ಸಮಾಜ ಕಲ್ಯಾಣ ಇಲಾಖೆ ಎಲ್ಲಾ ಅಧಿಕಾರಿ ವೃಂದ ಮತ್ತು ಸಿಬ್ಬಂದಿಗಳು ಹಾಗೂ ಸ್ಪರ್ಧಾತ್ಮಕ ಪರಿಚಯ ತಯಾರಿ ಮಾಡಿಕೊಳ್ಳುತ್ತಿರುವ ಜಿಲ್ಲೆಯ ಸಾವಿರಾರು ವಿದ್ಯಾರ್ಥಿ ಯುವ ಜನರು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 