ಬಾಗಲಕೋಟೆ: ಹೆಚ್ಚುವರಿಯಾಗಿ ಘೋಷಿಸಿದ 2017-18ನೇ ಹಂಗಾಮಿನ ರೈತರ ಕಬ್ಬು ಬಾಕಿ ಹಣವನ್ನು ಡಿಸೆಂಬರ 21 ರೊಳಗಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕಾಖರ್ಾನೆ ಮಾಲಿಕರಿಗೆ ಗಡುವು ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ರೈತರ ಕಬ್ಬು ಬಾಕಿ ಪಾವತಿ ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ಟನ್ಗೆ ಹೆಚ್ಚುವರಿಯಾಗಿ ಘೋಷಿಸಿದ ಹಣದಲ್ಲಿ ಶೇ.50 ರಷ್ಟು ಪಾವತಿಸಿ ಕಾಖರ್ಾನೆ ಪ್ರಾರಂಭಿಸಬೇಕು. ಪ್ರಾರಂಭಿಸಿದ 15 ದಿನಗೊಳಗಾಗಿ ಉಳಿದ ಶೇ.50 ಬಾಕಿ ಹಣವನ್ನು ಪಾವತಿಸಲು ತಿಳಿಸಲಾಗಿತ್ತು, ಆದರೆ ಇಲ್ಲಿಯವರೆಗೆ ಕೆಲವು ಕಾಖರ್ಾನೆಗಳು ಹೊರತುಪಡಿಸಿ 31.81 ಕೋಟಿ ರೂ.ಬಾಕಿ ಉಳಿದಿದ್ದು, ಡಿಸೆಂಬರ 21 ರೊಳಗಾಗಿ ಪೂತರ್ಿಯಾಗಿ ಪಾವತಿಸಲು ಗಡುವು ನೀಡಿದರು.
ಬೀಳಗಿ ಶುಗರ್ಸ್ 2.64 ಕೋಟಿ, ಜೆಮ್ ಶುಗರ್ಸ್ 5.24 ಕೋಟಿ, ಗೋದಾವರಿ ಶುಗರ್ಸ್ 3.67 ಕೋಟಿ, ನಿರಾಣಿ ಶುಗರ್ಸ್ 3.46 ಕೊಟಿ, ಪ್ರಭುಲಿಂಗೇಶ್ವರ ಶುಗರ್ಸ್ 10.38 ಕೋಟಿ, ರೈತರ ಸಹಕಾರಿ ಸಕ್ಕರೆ ಕಾಖರ್ಾನೆ 5.82 ಕೋಟಿ, ಸಾವರಿನ್ ಶುಗರ್ಸ್ 56 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಡಿಸೆಂಬರ 21 ರೊಳಗಾಗಿ ಬಾಕಿ ಹಣ ಪಾವತಿಸಲು ಕಾಖರ್ಾನೆಯವರು ಒಪ್ಪಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ಘೋಷಣೆಯಾಗಿದ್ದು, ಎಫ್ಆರ್ಪಿ ದರದಲ್ಲಿ ಎಚ್ & ಟಿ ಕಡಿತಗೊಳಿಸಿ ರೈತರಿಗೆ ಪಾವತಿಸಬೇಕಾದ ಮೊತ್ತವನ್ನು ಎಲ್ಲ ಕಾಖರ್ಾನೆಯವರು ಕಡ್ಡಾಯವಾಗಿ ನೋಟಿಸ್ ಬೋರ್ಡಗೆ ಪ್ರಕಟಿಸತಕ್ಕದ್ದು. ರೈತರು ಮತ್ತು ಕಾಖರ್ಾನೆಯವರು ಒಮ್ಮತದಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು. ನಿಯಾನುಸಾರ ಹಣ ಪಾವತಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದಲ್ಲಿ, ಶಾಂತಿಗೆ ಭಂಗವಾದಲ್ಲಿ, ಹಾನಿಯಾದಲ್ಲಿ, ಸಾರ್ವಜನಿಕ ಸಂಪರ್ಕಕ್ಕೆ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ದಕ್ಕೆಯಾದಲ್ಲಿ ರೈತರು ಮತ್ತು ಕಾಖರ್ಾನೆ ಮಾಲಿಕರು ಜವಾಬ್ದಾರರಾಗುವಿರಿ ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಸಕ್ಕರೆ ಕಾಖರ್ಾನೆ ಮಾಲಿಕರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.