ಸೈಕ್ಲಿಂಗ್ ಸ್ಪರ್ಧೆ ; ಸಿದ್ದಪ್ಪ, ಪೂಜಾ ಚಾಂಪಿಯನ್

ಲೋಕದರ್ಶನ ವರದಿ

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಉತ್ಸವ ಅಂಗವಾಗಿ ಇಲ್ಲಿ ಗುರುವಾರ ಆಯೋಜಿಸಿದ್ದ ಪುರುಷರ ವಿಭಾಗದ ಸೈಕ್ಲಿಂಗ್ ಸ್ಪಧರ್ೆಯಲ್ಲಿ ಗೋಕಾಕ ತಾಲೂಕಿನ ಪಾಮಲದಿನ್ನಿಯ ಸಿದ್ದಪ್ಪ ಡಬಾಜ ಪ್ರಥಮ ಸ್ಥಾನ ಗಳಿಸಿ ಮಿಂಚಿದರೆ, ಗೋಕಾಕದ ಬಸವರಾಜ ದಳವಾಯಿ ದ್ವಿತೀಯ ಮತ್ತು ಹುಕ್ಕೇರಿ ತಾಲೂಕಿನ ಸಾರಾಪುರದ ಶೆಟ್ಟೆಪ್ಪ ಗಸ್ತಿ ತೃತೀಯ ಸ್ಥಾನ ಪಡೆದುಕೊಂಡರು.

24 ಕಿ.ಮೀ. ದೂರದ ಸ್ಪಧರ್ೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ 34 ಸ್ಪಧರ್ಾಳುಗಳು ಪಾಲ್ಗೊಂಡಿದ್ದರು. ತುಂತುರು ಮಳೆ ಹನಿಗಳ ಸಿಂಚನದ ಮಧ್ಯೆ ಉತ್ಸಾಹದಿಂದ ಸೈಕಲ್ ಪೆಡಲ್ ತುಳಿದರು. 

ಮಹಿಳೆಯರ ವಿಭಾಗದ ಸೈಕ್ಲಿಂಗ್ ಸ್ಪಧರ್ೆಯಲ್ಲಿ ಬೆಳಗಾವಿಯ ಪೂಜಾ ಮುಚ್ಚಂಡಿ, ಕಡೋಲಿಯ ಸೃಷ್ಟಿ ಪಾಟೀಲ ಮತ್ತು ಬೆಳಗಾವಿಯ ಭಕ್ತಿ ಮುಚ್ಚಂಡಿ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಪಡೆದರು. 11 ಕಿ.ಮೀ. ಸ್ಪಧರ್ೆಯಲ್ಲಿ ಒಂಬತ್ತು ಸ್ಪಧರ್ಾಳುಗಳು ಭಾಗವಹಿಸಿದ್ದರು. 

ಗೆಲುವಿನ ದಡ ಸೇರುವ ಹುಮ್ಮಸ್ಸಿನೊಂದಿಗೆ ಸಾಗುತ್ತಿದ್ದ ಒಂದಿಬ್ಬರು ಪಟುಗಳು, ಸೈಕಲ್ ನಿಯಂತ್ರಣ ತಪ್ಪಿದ ಕಾರಣ ಕುಸಿದು ಬಿದ್ದು ಪೆಟ್ಟು ತಿಂದರು. 

ಸ್ಪಧರ್ೆಗೆ ನಿಗದಿಪಡಿಸಿದ್ದ ಮಾರ್ಗ ಉತ್ತಮವಾಗಿರಲಿಲ್ಲ. ಕಾಟಾಚಾರಕ್ಕೆ ಎಂಬಂತೆ, ಇದನ್ನು ಆಯೋಜಿಸಲಾಗಿದೆ ಎನ್ನುವ ಆರೋಪ ಕ್ರೀಡಾಪಟುಗಳಿಂದ ಕೇಳಿಬಂದಿತು.

ಪಟ್ಟಣದ ಅರಳಿಕಟ್ಟಿ ವೃತ್ತದ ಬಳಿ ಬೈಲಹೊಂಗಲ ಎಪಿಎಂಸಿ ಅಧ್ಯಕ್ಷ ಭರಮಪ್ಪ ಸತ್ಯನವರ ಸ್ಪಧರ್ೆಗೆ ಚಾಲನೆ ನೀಡಿದರು. ರಾಯಬಾಗ ಸಿಪಿಐ ಎನ್.ಮಹೇಶ, ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಕಾರ್ಯದಶರ್ಿ ಶ್ರೀಶೈಲ ಕುರಣಿ, ರವಿ ಜಾಲಿಕಟ್ಟಿ, ಬಿ.ಜೆ.ಪಾಟೀಲ, ಆರ್.ಎನ್.ಪೂಜಾರಿ, ಇತರರು ಇದ್ದರು.