ಖಾಸಗೀ ಶಾಲೆಗೆ ಕಡಿವಾಣ ಹಾಕಿ: ಸರಕಾರಿ ಶಾಲೆಯ ಪ್ರವೇಶಾತಿ ಪಡೆಯಿರಿ
Cut down on private schools: Get admission in government schools
ಶಿಗ್ಗಾವಿ 13 : ಇಂದು ಶಿಕ್ಷಣ ವ್ಯಾಪಾರೀಕರಣವಾಗಿರುವ ಕಾರಣ ಪಾಲಕರು ಪೋಷಕರು ಖಾಸಗೀ ಶಾಲೆಯ ವ್ಯಾಮೋಹಕ್ಕೆ ಒಳಗಾಗದೇ ಸರಕಾರಿ ಶಾಲೆಯ ಪ್ರವೇಶಾತಿ ಪಡೆಯಿರಿ ಎಂದು ಮುಖ್ಯೋಪಾಧ್ಯಾಯಿನಿ ವಿನೋದಾ ಪಾಟೀಲ ಹೇಳಿದರು. ಪಟ್ಟಣದ ವಾರ್ಡ ನಂ 5ರ ಸರ್ಕಾರಿ ಪ್ರೌಢಶಾಲೆ ಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನುರಿತ ಶಿಕ್ಷಕರಿಂದ ಸ್ವಾವಲಂಬಿ ಜೀವನ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದರು. ಕಾಂಗ್ರೆಸ್ ಮುಖಂಡ ಮುಕ್ತಾರಖಾನ ತಿಮ್ಮಾಪೂರ ಮಾತನಾಡಿ ಮಕ್ಕಳು ಮೊಬೈಲ್ ಹಾಗೂ ಟಿ.ವ್ಹಿ ಯಿಂದ ದೂರವಿದ್ದು ದಿನನಿತ್ಯ ಚೆನ್ನಾಗಿ ವಿಧ್ಯಾಭ್ಯಾಸ ಮಾಡುವುದರ ಜೊತೆಗೆ ಶಾಲೆಗೆ ಕೀರ್ತಿ ತರಬೇಕು ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಈ ಸಂದರ್ಭದಲ್ಲಿಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆ ರಾಜ್ಯ ಉಪಾಧ್ಯಕ್ಷ ಇಮಾಮ ಹುಸೇನ್ ಆದಂಭಾಯಿ, ಶಿಕ್ಷಕರಾದ ಬಸವರಾಜ ಬಸರೀಕಟ್ಟಿ,ಸಿ.ಎಸ್.ಚರಂತಿಮಠ,ವಿದ್ಯಾವತಿ ಹೂಗಾರ, ನಾಗರಾಜ ಹುಲೇಕಲ್,ಭರತಕುಮಾರ ಕಳ್ಳೀಮನಿ, ಭಾರತಿ ಹೂಗಾರ, ಬಸವರಾಜ ಮಮದಾಪೂರ, ಮೋಹನ್ ಹಿರೋಲಾಲ ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 