ದೇವಣಗಾಂವದಲ್ಲಿ ಪಲ್ಸ್‌ ಪೋಲಿಯೊಗೆ ಚಾಲನೆ

ದೇವಣಗಾಂವದಲ್ಲಿ ಪಲ್ಸ್‌ ಪೋಲಿಯೊಗೆ ಚಾಲನೆ  Pulse polio launched in Devangaon

ಅಲಮೇಲ 28: ಅಲಮೇಲ ತಾಲೂಕಿನ ದೇವಣಗಾಂವ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕಾ ಅಭಿಯಾನಕ್ಕೆ ಮಾಜಿ ಶಾಸಕ ರಮೇಶ್ ಭೂಸನೂರ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ದೇಶವನ್ನು ಸಂಪೂರ್ಣವಾಗಿ ಪೋಲಿಯೊ ಮುಕ್ತವಾಗಿಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.  

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀಮಂತ ನಾಗೂರ, ಪಿಕೆಪಿಎಸ್ ಅಧ್ಯಕ್ಷ ಶಣ್ಮುಖಪ್ಪ ಸೋಮನಾಯಕ, ಸಿದ್ದಯ್ಯ ಮಠಪತಿ, ಮಲ್ಲಿಕಾರ್ಜುನ ಬಗಲಿ, ದತ್ತಾತ್ರೇಯ ಸೊನ್ನ, ಶಿವಮೂರ್ತಿ ಕಾಟಕರ, ಗಾಲಿಬ ಸೋಮನಾಯಕ, ಗುರು ನಿಂಬಾಳ, ಎಂ.ಆರ್‌. ಕುಲಕರ್ಣಿ, ಎ.ಕೆ. ಪತ್ತಾರ, ಎಸ್‌.ಬಿ. ಹೆಗ್ಗಣದೊಡ್ಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.