ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ: ನಾಡಗೌಡ(ಅಪ್ಪಾಜಿ)
Culture will survive only if the language survives: Nadagowda (Appaji)
ಲೋಕದರ್ಶನ ವರದಿ
ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ: ನಾಡಗೌಡ(ಅಪ್ಪಾಜಿ)
ಮುದ್ದೇಬಿಹಾಳ 02: ಕನ್ನಡ ಭಾಷೆ ಅನ್ನೋದು ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಬದಲಾಗಿ ಸಂಸ್ಕೃತಿ, ಪರಂಪರೆ, ಈ ನೆಲದ ಪ್ರತೀಕವಾಗಿದೆ. ನೆಲ ಜಲದ ರಕ್ಷಣೆ ಜೊತೆಗೆ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಕನ್ನಡದ ಕೈಂಕರ್ಯದ ಮನಸ್ಸುಗಳು ಒಂದಾಗುತ್ತಿದ್ದಾಗ ಕನ್ನಡಪರ ಚಟುವಟಿಕೆ ವೃದ್ಧಿಸುತ್ತದೆ ಮತ್ತು ಭಾಷೆಯ ಅಭಿಮಾನ ಸದಾ ನಮ್ಮಲ್ಲಿರಬೇಕು. ಇತ್ತೀಚಿನ ದಿನಗಳಲ್ಲಿ ನೆಲ,ಜಲ,ಭಾಷೆ,ಅಭಿಮಾನ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಆದರೇ ಅದು ಕೇವಲ ಒಂದು ದಿನದ ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗಿರದೆ ನಿರಂತರ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಾಲೂಕಾ ಆಡಳಿತ ಸೌಧ ಕಚೇರಿಯ ವಿಶಾಲ ಮೈದಾನದಲ್ಲಿ ತಾಲೂಕಾ ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಏಕೀಕರಣಕ್ಕಾಗಿ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ. ಶಿವರಾಮ ಕಾರಂತ, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ ಅವರಂತಹ ಅನೇಕ ಮಹಾನ್ ವ್ಯಕ್ತಿಗಳು ಸೇರಿದಂತೆ ಹಲವಾರು ಜನ ಕರ್ನಾಟಕ ಏಕಿಕರಣಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹೋರಾಡಿ ಚದುರಿಹೋಗಿ ಎಲ್ಲ ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನಾಗಿ ಮಾಡಿದ್ದಾರೆ. ಆದರೇ ಇತ್ತಿಚಿಗೆ ಕರ್ನಾಟಕ ಒಡೆದು ಇಬ್ಭಾಗ ಮಾಡಿ ಆ ಕರ್ನಾಟಕ ಈ ಕರ್ನಾಟಕ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ ಅಂತಹ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದರು.
ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಅಸ್ಮಿತೆ. ಭಾರತದಲ್ಲಿರುವ ಎಲ್ಲಾ ಭಾಷೆಗಳ ರಾಣಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಸುಂದರ ಭಾಷೆ ನಮ್ಮ ಕನ್ನಡ. ಕನ್ನಡವನ್ನು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ, ನಮ್ಮ ದೈನಂದಿನ ಚಟುವಟಿಕೆಗಳಲ್ಲೂ ಕನ್ನಡವನ್ನೇ ಬಳಸುವುದು ನಮ್ಮ ಜವಾಬ್ದಾರಿ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವುದರೊಂದಿಗೆ ನಮ್ಮ ಭಾಷೆಯನ್ನಾಗಿ ಶ್ರೀಮಂತಿಕೆಯನ್ನು ವಿಸ್ತರಿಸೋಣ. ಕರ್ನಾಟಕದಲ್ಲಿ ಆಂಧ್ರ, ತಮಿಳುನಾಡು, ಕೇರಳ ದಂತಹ ನೆರೆ ರಾಜ್ಯಗಳಿಂದ ವಲಸೆ ಬಂದ ಜನರೆ ಇಂದು ಬೆಂಗಳೂರಿನಲ್ಲಿನ ರೀಯಲ್ ಎಷ್ಟೀಟ್ ಉಧ್ಯಮ ಸೇರಿದಂತೆ ಶೇಕಡಾ 80 ರಷ್ಟು ಬೇರೆ ಬೇರೆ ಬಹುದೊಡ್ಡ ಕಂಪನಿಗಳನ್ನು ತೆರೆದು ಉದ್ಯೋಗ ಮಾಡುತ್ತಿರುವುದರಿಂದ ನಿಜವಾದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ನಾವೇಲ್ಲ ಕನ್ನಡಿಗರು ಮೊದಲು ಒಗ್ಗಟ್ಟು ಪ್ರದರ್ಶಿಸಬೇಕು. ಅವರಂತೆ ಎಲ್ಲ ಉದ್ಯಮದಲ್ಲಿ ಕರ್ನಾಟಕಕ್ಕೆ ಮೊದಲು ಆದ್ಯತೆ ನೀಡುವಂತಾಗಬೇಕು ಎಂದರು.
ತಾಲೂಕಾ ಅಕ್ಷರದಾಸೋಹದ ಸಹಾಯ ನಿರ್ದೇಶಕ ಎಂ ಎಂ ಬೆಳಗಲ್ಲ ಅವರು ವಿಶೇಷ ಉಪನ್ಯಾಸ ನೀಡುವ ಮೂಲಕ ಮಾತನಾಡಿ ಕರುನಾಡು, ಕನ್ನಡಾಂಭೆಯ ನಾಡು, ಶ್ರೀಗಂಧದ ಬೀಡು ಎಂದೆಲ್ಲ ಕರೆಯಲ್ಪಡುವ ನಮ್ಮ ಕರ್ನಾಟಕ, ಸುಂದರ ಕೃಷ್ಣಾ, ಕಾವೇರಿ ಮತ್ತು ತುಂಗಭದ್ರಾ ನದಿಗಳ ನಾಡು. ಸಂತರು, ದಾಸರು, ಶಿವಶರಣರು ಮತ್ತು ಮಹಾಕವಿಗಳಿಂದ ಕಂಗೊಳಿಸುವ ಈ ನಾಡಿನಲ್ಲಿ ಹುಟ್ಟಿರುವುದು ನಾವೆಲ್ಲರೂ ಅದೃಷ್ಟವಂತರು. ನವೆಂಬರ್ 1ರಂದು ರಾಜ್ಯಾದ್ಯಂತ ಕೆಂಪು-ಹಳದಿ ಬಣ್ಣದ ಧ್ವಜವನ್ನು ಹಾರಿಸಿ, ಜಯ ಭಾರತ ಜನನೀಯ ತನುಜಾತೆ ಎಂಬ ಗೀತೆಯನ್ನು ಹಾಡಿ ಸಂಭ್ರಮದಿಂದ ಆಚರಿಸುತ್ತೇವೆ. ಇಂದಿನ ಈ ಶುಭದಿನದಂದು, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ, ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ ಮತ್ತು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಸದಾ ಬದ್ಧನಾಗಿರುತ್ತೇನೆ ಎಂದು ಸಂಕಲ್ಪಿಸೋಣ ಎಂದರು.
ಶನಿವಾರ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಶಾಲೆಗಳಿಂದ ಶರಣ, ಸಂತರ, ದಾರ್ಶನಿಕರ, ಹೋರಾಟಗಾರರ ಸ್ಥಬ್ಧ ಚಿತ್ರಗಳೋಂದಿಗೆ ಭುವನೇಶ್ವರಿಯ ಭಾವಚಿತ್ರ ಹೊತ್ತು ಪಟ್ಟಣದ ಪ್ರಮುಖ ಬೀದಿಗಳನ್ನು ಮೇರವಣೆಗೆ ನಡೆಸಲಾಯಿತು. ಬಳಿಕ ಸ್ಥಬ್ದ ಚಿತ್ರಗಳಲ್ಲಿಬಾಗವಹಿಸಿದ (ಒನಕೆ ಓಬವ್ವ) ಸ್ಥಬ್ಧ ಚಿತ್ರಕ್ಕೆ ಪಟ್ಟಣದ ಚಿನ್ಮಯ ಜೆಸಿ ಶಾಲೆ ಪ್ರಥಮ ಸ್ಥಾನ, (ಅಕ್ಕ ಮಹಾದೇವಿ) ಸ್ಥಬ್ಧ ಚಿತ್ರಕ್ಕೆ ಹುಲ್ಲೂರ ಎಸ್ ಎನ್ ಡಿ ಶಾಲೆಯ ದ್ವೀತಿಯ ಸ್ಥಾನ, (ಪುರಂದರದಾಸರು) ಸ್ಥಬ್ಧ ಚಿತ್ರಕ್ಕೆ ಕೆಜಿಎಸ್ ನಂ 2 ಶಾಲೆಯ ತೃತೀಯ ಸ್ಥಾನ ಪಡೆದುಕೊಂಡ ಶಾಲೆಗಳಿಗೆ ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.
ತಹಶಿಲ್ದಾರ ಕೀರ್ತಿ ಚಾಲಕ, ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸಿಪಿಐ ಮಹಮ್ಮದ ಫಸಿವುದ್ದಿನ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅರವಿಂದ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಬಿ ಸಾವಳಗಿ, ತಾಪಂ ಖೂಬಾಶಿಂಗ್ ಜಾಧವ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ಸಿಡಿಪಿಓ ಶಿವಮೂರ್ತಿ ಕುಂಬಾರ, ಪಿಡಬ್ಲೂಡಿ ಎಇಇ ಎ ಬಿ ರಡ್ಡಿ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ತಾಲೂಕಾ ಪಶು ಇಲಾಖೆ ಮೇಟಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 