ಸಬಿಕರ ಗಮನ ಸೆಳೆದು ಸಾಂಸ್ಕೃತಿಕ ನೃತ್ಯ, ನಾಟಕ, ಸುಗನ ಸಂಗೀತ, ಜನಪದಿಯ ಕಲಾ ತಂಡಗಳ ಪ್ರದರ್ಶನ

ಸಬಿಕರ ಗಮನ ಸೆಳೆದು ಸಾಂಸ್ಕೃತಿಕ   ನೃತ್ಯ, ನಾಟಕ, ಸುಗನ ಸಂಗೀತ, ಜನಪದಿಯ ಕಲಾ ತಂಡಗಳ ಪ್ರದರ್ಶನ  Cultural dance, drama, musical accompaniment, and folk art troupes performed to attract the attentio

ಧಾರವಾಡ  08: ಸಮಾರೋಪ ರಾಜ್ಯಮಟ್ಟದ ಕನಕ ಕವಿ ಕಾವ್ಯ ಸಮ್ಮೇಳನ ಧಾರವಾಡ ಮನಸೂರ ರೇವಣಸಿದ್ಧೇಶ್ವರ ವಿದ್ಯಾಪೀಠ (ರಿ) ಮಹಾಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ 2024 ರ ನಿಮಿತ್ತ ರಾಜ್ಯಮಟ್ಟದ ಕನಕ ಕವಿಗೋಷ್ಠಿ ಶ್ರೀಮಠದ ಯಾತ್ರಿ ನಿವಾಸ ಸಭಂಗಣದಲ್ಲಿ ಜರುಗಿತು ಕನಕ ಕವಿಗೋಷ್ಠಿ ಸಮ್ಮೇಳನಕ್ಕೆ ತಮ್ಮ ಸ್ವರಚಿತ ಕವನ ವಾಚಿಸುವುದರ ಮೂಲಕ ಚಾಲನ ನೀಡಿದ ಶ್ರೀಗಳು ಕಾವ್ಯವೊಂದು ಸಹಜ ಕ್ರಿಯೇ ಅದೊಂದು ವರವು ಹೌದು ಇದುವರೆಗೂ ಬೇರೆ ಬೇರೆ ದಾರ್ಶನಿಕರ ಕುರಿತು ಕಾವ್ಯಗಳು ಹುಟ್ಟಿರುತ್ತೇವೆ ಕನಕರ ಜೀವಿತಾವಧಿಯಲ್ಲಿಯೆ ಪುರಂದರ ದಾಸರು ಕನಕರ ಕುರಿತು ಕೀರ್ತನೆ ಹಾಡಿದರು. ಆದರೆ ಇದುವರೆಗೂ ಕನಕರ ಕುರಿತೆ ಕಾವ್ಯಗಳು ಕನ್ನಡ ಸಾರಸ್ವತ ಲೋಕಕ್ಕೆ ಬಂದಿರುವುದು. ತೀರಾ ಕಡಿಮೆ ಆದರೆ ಎರಡು ದಶಕಗಳಿಂದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಆರಂಭವಾದ ಮೇಲೆ ಕನಕರ ಕವನಗಳನ್ನು ಕವಿಗಳು ಬರೆಯುತ್ತಿರುವುದು ಅತೀ ಸಂತಸವಾಗಿದೆ ಎಂದು ಶ್ರೀಗಳು ನುಡಿದರು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ   ಈಶ್ವರ ಮಮದಾಪೂರ ಗರ್ವಾನಿತ ಅತಿಥಿಗಳಾಗಿ ಡಾಽಽ ಶಿವಾನಂದ ನರಟ್ಟಿ,   ಸುಮಾ ಬಸವರಾಜ ಹಡಪದ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಕವಿ ಕವಿತ್ರೆಯರು ತಮ್ಮ ಕಾವ್ಯವಾಚನ ಮಾಡಿದರು. ಕನಕದಾಸರ ಬದುಕು- ಬರಹ ವಿಚಾರ ಸಂಕಿರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಕುಮಾರ ಬೆಕ್ಕೇರಿ ರವರು ಉದ್ಘಾಟಿಸಿ   ರೇವಣಸಿದ್ಧೇಶ್ವರ ವಿದ್ಯಾಪೀಠವು ಹಲವಾರು ವರ್ಷಗಳಿಂದ ಕನಕ ಸಾಹಿತ್ಯ ಪ್ರಸಾರಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರಚಾರ ಮಾಡುತ್ತಿರುವುದು ಶ್ಲಾಘೀನೀಯ ನಮ್ಮ ಇಲಾಖೆಯ ಸಹಭಾಗಿತ್ವದಲ್ಲಿ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಜರುಗುತ್ತಿರುವುದು ಇನ್ನಷ್ಟು ಮೆರಗು ನೀಡಿದೆ ಎಂದು ನುಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನಪೀಠ ಸಂಯೋಜಕರಾದ ಡಾ. ಹನುಮಗೌಡ ಸಿ. ಪಾಟೀಲ ಕರ್ನಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ನಿಂಗಪ್ಪ ಎನ್‌. ಸವಣೂರ ಮಾತನಾಡಿದರು. ಕನಕ ಪ್ರಶಸ್ತಿ ಪ್ರದಾನ : ಸಾಹಿತ್ಯ ಕ್ಷೇತ್ರದಲ್ಲಿ ಡಾ. ರುದ್ರಣ್ಣ ಚುಲಮಿ, ಕಲಾ ಕ್ಷೇತ್ರದಲ್ಲಿ ಶ್ರೀಮತಿ ಸುಮಾ ಬಸವರಾಜ ಹಡಪದ, ಜಾನಪದ ಕಲಾಕ್ಷೇತ್ರದಲ್ಲಿ   ಗುರು ಎಸ್‌. ಚಲವಾದಿ, ಚಿತ್ರಕಲೆ ಕ್ಷೇತ್ರದಲ್ಲಿ ಬಸವರಾಜ ಸಿ.ಎಸ್, ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ರವಿಕುಮಾರ ಪೂಜಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕನಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಕಲಾ ತಂಡಗಳ ಪ್ರದರ್ಶನ : ಖ್ಯಾತ ಕಲಾ ತಂಡಗಳಾದ ಡೊಳ್ಳುಕುಣ ತ / ಹಾಡಿಕೆ, ಕರಡಿ ಮಜಲು, ಭಜನಾ ವೀರಗಾಸೆ, ಲಮಾಣ ಕುಣ ತ ಹಂತಪದ ಸಂಪ್ರದಾಯ ಪದ, ಸೋಭಾನಪದ, ಶಾಸಿೊಥಯ ಸಂಗೀತ ಸುಗಮ ಸಂಗೀತ ಶಹನಾಯಿವಾದನ, ಜನಪದ ಕಲಾತಂಡಗಳು ನೃತ್ಯ, ಭರತನಾಟ್ಯ, ಸಮೋಹ ನೃತ್ಯಗಳ ನೂರಾರು ಕಲಾ ತಂಡಗಳ ಅಭಿನಯವು ನೆರೆದ ಜನರ ಮನಸೂರೆಗೊಂಡವು. ದಾಸವಾಣ ಶ್ರೀಧರ ಭಜಂತ್ರಿಯವರ ಶಹನಯಿವಾದನ ಸಂಗೀತ ಲೋಕವನ್ನೇ ಸೃಷ್ಠಿಸಿತ್ತು ಸಂಪ್ರದಾಯಕ ಪದಗಳು ಏಕಾಂಕ ನಾಟಗಳು ಪ್ರದರ್ಶನಗೊಂಡವು. ಅಚ್ಯುಕಟ್ಟಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಅಗತ್ಯ ಸುದ್ಧಿ ಪ್ರಕಟಣೆ ಕೃಪೆಗಾಗಿಮನಸೂರ ಶ್ರೀ ರೇವಣಸಿದ್ಧೇಶ್ವರ ವಿದ್ಯಾಪೀಠ (ರಿ) ಮಹಾಮಠದಲ್ಲಿ “ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ-2024” ಕನಕ ಜ್ಯೋತಿ ಹೊತ್ತಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.    ಧಾರವಾಡ ಮನಸೂರ ಶ್ರೀ ರೇವಣಸಿದ್ಧೇಶ್ವರ ವಿದ್ಯಾಪೀಠ (ರಿ) ಮಹಾಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಐದು ದಿನಗಳ ಕಾಲ ನಡೆಯುವ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ 2024 ಕನಕ ಜ್ಯೋತಿಯನ್ನು ಪೀಠಾಧ್ಯಕ್ಷ ಪೂಜ್ಯ ಡಾಽಽ ಬಸವರಾಜ ದೇವರು ಶ್ರೀಗಳ ಸಾನಿಧ್ಯದಲ್ಲಿ ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಕನಕ ಜೋತಿ ಹೊತ್ತಿಸಿ ಉತ್ಸವ ಚಾಲನೆ ನೀಡಲಾಯಿತು. ಶ್ರೀಗಳು ಆರ್ಶೀವಚನ ನೀಡಿ ಕನಕರು ನೀಡಿದ ಹರಿಭಕ್ತಿಸಾರ ಮೋಹನ ತರಂಗಿಣ ರಾಮಧಾನ್ಯ ಚರಿತೆ ಕೀರ್ತನೆಗಳು ಮುಂಡಿಗೆಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಕನ್ನಡ ಸಾಹಿತ್ಯ ಕನಕರ ಸಾಹಿತ್ಯವನ್ನು ಬಿಟ್ಟರೆ ಅಪೂರ್ಣವಾಗುತ್ತದೆ. ಮಾನವೀಯ ಮೌಲ್ಯ ಒಳಗೊಂಡ ಜಾತಿ ಮತ ಪಂಥ ಭಾಷೆ ಗಡಿ ಮೀರಿ ಜಾಗತೀಕವಾಗಿ ಮೌಲ್ಯಗಳ ಸಾರುವ ಕನಕರ ಚಿಂತನೆ ಸದಾ ಸ್ಪೂರ್ತಿಯಾಗಿದೆ ಎಂದು ಶ್ರೀಗಳಾದ ಪೂಜ್ಯ ಡಾಽಽ ಬಸವರಾಜ ದೇವರು ನುಡಿದರು. ರಂಗಾಯಣ ನಿರ್ದೇಶಕರು ಡಾ. ರಾಜು ತಾಳಿಕೋಟಿ ಮಾತನಾಡಿ ಜಗತ್ತಿಗೆ ಕನಕರ ವಿಚಾರಗಳು ನೆಮ್ಮದಿ ನೀಡಬಲ್ಲವು ಈ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಜ್ಯೋತಿಯು ನಾಡಿನಾದ್ಯಂತ ಸಾಹಿತ್ಯ ಸಂಸ್ಕೃತಿಕ ಲೋಕ ಸೃಷ್ಠಿಸುವ ಶಕ್ತಿ ಹೊಂದಿದೆ. ಶ್ರೀ ವಿದ್ಯಾಪೀಠವು ಹತ್ತಾರು ವರ್ಷಗಳಿಂದ ಕನಕದಾಸರ ಸಾಹಿತ್ಯ ಪ್ರಸಾರ ಮಾಡುತ್ತಿರುವುದು ನಮ್ಮಂತವರಿಗೂ ಸ್ಪೂರ್ತಿ ತಂದಿದೆ. ಈ ಐದು ದಿನಗಳ ಕಾಲ ಕನಕರ ಸಾಹಿತ್ಯ ಚಿಂತನೆ ಶ್ರವಣ ಮಾಡುವುದು ನಮ್ಮೆಲ್ಲರ ಭಾಗ್ಯವೆಂದು ನುಡಿದರು.    

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಶ್ರೀ ಬಸವರಾಜ ಮಲಕಾರಿ ಮಾತನಾಡಿದರು. ಗಣ್ಯರಾದ ಶಿವಾನಂದ ಮುತ್ತಣ್ಣನವರ ಹಾಗೂ ಇನ್ನೂ ಅನೇಕ ಹಿರಿಯರು, ಸದ್ಭಕ್ತರು, ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಸದ್ಭಕ್ತರು ಶ್ರೀ ರೇವಣಸಿದ್ಧೇಶ್ವರ ಗದ್ದುಗೆಗೆ ಹಾಗೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಹಿರಿಯ ರಂಗಕರ್ಮಿ ಶ್ರೀ ಪ್ರಭು ಹಂಚಿನಾಳ ಕಾರ್ಯಕ್ರಮ ನಿರೂಪಿಸಿ ವಂದನಾರೆ​‍್ಣ ಮಾಡಿದರು.