ಬೆಂಗಳೂರು, ಫೆ 28: ಕ್ಷುಲ್ಲಕ ವಿಚಾರಕ್ಕೆ ಏಕಾಏಕೀ ಯುವಕರಿಬ್ಬರ ಮೇಲೆ ಪುಡಿ ರೌಡಿಗಳು ಲಾಂಗ್, ಮುಚ್ಚಿ ನಿಂದ ಹಲ್ಲೆ ಮಾಡಿಸಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂದಿನಿ ಲೇಔಟ್ ನಲ್ಲಿ ಫೆ. 26ರ ರಾತ್ರಿ ಪುಡಿರೌಡಿಗಳಾದ ವಿನಯ್, ಅಜಯ್ ಯುವಕರ ಮೇಲೆ ದಾಳಿ ಮಾಡಿದ್ದಾರೆ.
ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದು, ಯುವಕರನ್ನು ಗುರುತಿಸಿ ದೂರು ದಾಖಲಿಸಿಕೊಂಡಿದ್ದಾರೆ.
ರಸ್ತೆ ಮೇಲೆ ಲಾಂಗ್, ಮಚ್ಚುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಘಟನೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.