ಕಿಕ್ಕಿರಿದು ಸೇರಿದ ಜನಸಂದಣಿ: ನಾಟಕಗಳು ಯಶಸ್ವಿ ಪ್ರದರ್ಶನ
Crowds gather: Plays are a success
ಬೆಳಗಾವಿ ಫೆ.12: ‘ವೇನಾಸಂ’ ಬೆಳಗಾವಿ ನೇತೃತ್ವದಲ್ಲಿ, ಕನ್ನಡ ಭವನ ಆಶ್ರಯದಲ್ಲಿ, ಡಾ. ಸಿದ್ದು ಹುಲ್ಲೊಳ್ಳಿಯವರ ನೆರವಿನಲ್ಲಿ, ದಿನಾಂಕ 9ರಿಂದ ಮೂರು ದಿನಗಳ ಕಾಲ, ಸಾಣೇಹಳ್ಳಿ ಶಿವಸಂಚಾರ ಪ್ರಸ್ತುಪಡಿಸಿದ ನೆಹರು ನಗರದ ಕನ್ನಡ ಭವನದಲ್ಲಿ ಯಶಸ್ವಿ ನಾಟಕಗಳು ಪ್ರದರ್ಶನಗಳಾದವು.
ಮೊದಲನ ದಿನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ರಚಿಸಿದ ಜಗದೀಶ ಆರ್.ರವರ ನಿರ್ದೇಶನದ, ‘ಜಂಗಮದೆಡೆಗೆ’, ಎರಡನೆಯ ದಿನ ಕೃಷ್ಣಮೂರ್ತಿ ಮೂಡಬಾಗಿಲುರವರ ರಚನೆ ಮತ್ತು ನಿರ್ದೇಶನದ ‘ಕಳ್ಳರ ಸಂತೆ’ ಮತ್ತು ಮೂರನೆಯ ದಿನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ವೈ.ಡಿ. ಬದಾಮಿಯವರು ನಿರ್ದೆಶನದ ‘ಶಿವಯೋಗಿ ಸಿದ್ಧರಾಮೇಶ್ವರ’ ನಾಟಕಗಳು ಯಶಸ್ವಿಯಾಗಿ ಪ್ರದರ್ಶನವಾದವು.
ಸಮಾರೋಪ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಕಾರಂಜಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಶುಭ ನುಡಿ ಹೇಳಿ, 12ನೆಯ ಶತಮಾನದ ವಚನಕಾರರಲ್ಲಿ ಶಿವಯೋಗಿ ಸಿದ್ಧರಾಮೇಶ್ವರವರು ಮಹತ್ವದ ವಚನಕಾರರು ಮುಖ್ಯವಾಗಿ ಕಾಯಕಯೋಗಿಯಾಗುವ ಮೂಲಕ ಕೆರೆಗಳನ್ನು ಕಟ್ಟಿಸಿದ್ದು ಚರಿತ್ರಾರ್ಹವಾದ ಸಂಗತಿಯೆಂದು ಹೇಳುತ್ತ ‘ವೇನಾಸಂ’ ಗೆ ಭವಿಷ್ಯತ್ತಿನಲ್ಲಿ ಉತ್ತಮ ಅವಕಾಶವಿದೆಯೆಂದರು. ಡಾ. ಸಿದ್ದು ಹುಲ್ಲೊಳ್ಳಿಯವರು ಮಾತನಾಡಿ ಇಲ್ಲಿ ಸೇರಿದ ಬಹುತೇಕ ಪ್ರೇಕ್ಷಕರು ಹಿರಿಯರು ಇದ್ದು, ತಮ್ಮ ಮಕ್ಕಳು-ಮೊಮ್ಮಕ್ಕಳು ಇಂತಹ ನಾಟಕಗಳನ್ನು ನೋಡಬೇಕೆಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ‘ವೇನಾಸಂ’ ಅಧ್ಯಕ್ಷ ಯ.ರು.ಪಾಟೀಲರವರು ವೇನಾಸಂ ಉದ್ಘಾಟನೆಯಾಗಿ ಕೇವಲ 24 ದಿನಗಳಾಗಿದ್ದು, ಇಂದು 4ನೆಯ ಯಶಸ್ವಿ ಪ್ರಯೋಗ ಕಂಡಿದ್ದು ಈ ಯಶಸ್ಸಿನ ಪಾಲುದಾರರು ಸಹೃದಯ ಪ್ರೇಕ್ಷಕರು ಮತ್ತು ‘ವೇನಾಸಂ’ ಪದಾಧಿಕಾರಿಗಳಾಗಿದ್ದು, ಭವಿಷ್ಯತ್ತಿನಲ್ಲಿ ‘ಮಕ್ಕಳ ರಂಗ ಶಿಬಿರ’ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ತಮ್ಮ ಸಹಕಾರ ಇದೇ ರೀತಿ ಇರಲಿ ಎಂದರು.
ಮಹಾನಗರ ಸಭೆ ಆಯುಕ್ತ ಕಾರ್ತಿಕ, ವಾಣಿಜ್ಯ ತೆರಿಗೆ ಉಪ ಆಯುಕ್ತ ಸಂಗಪ್ಪ ಕೋಳಿ, ಶಿಕ್ಷಣ ತರಬೇತಿ ಮಹಾವಿದ್ಯಾಲಯದ ಪ್ರಾಚಾರ್ಯ ಎನ್. ಶ್ರೀಕಂಠ, ವೇನಾಸಂ ಗೌರವಾಧ್ಯಕ್ಷ ದಯಾನಂದ ಮಲಕಾಯಿಯವರನ್ನು ಒಳಗೊಂಡಂತೆ, ಇನ್ನಿತರ ಪದಾಧಿಕಾರಿಗಳಾದ ಶಂಕರ ಅರಕೇರಿ, ಸೋಮಶೇಖರ ಮಲ್ಲಣ್ಣವರ, ಉಪಸ್ಥಿತರಿದ್ದರು. ಕನ್ನಡ ಭವನದ ಉಪಾಧ್ಯಕ್ಷ ಶಿವನಗೌಡ ಪಾಟೀಲ ಸದಸ್ಯರಾದ ಡಾ.ಸರಜೂ ಕಾಟ್ಕರ ಉಪಸ್ಥಿತರಿದ್ದರು. ವೇನಾಸಂ ಜಂಟಿ ಕಾರ್ಯದರ್ಶಿ ಸುರೇಶ ಕೋರಕೊಪ್ಪರವರು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಬಸವರಾಜ ತಳವಾರವರು ನಿರೂಪಿಸಿ, ವಂದನಾರೆ್ಣ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 