ಬೆಳೆ ಕಟಾವು ಮೇಲ್ವಿಚಾರಣೆ ಮಾಡಿದ: ಬಿ ಎಸ್ ಕಡಕಬಾವಿ
Crop harvesting supervised by: B. S. Kadakabavi
ಇಂಡಿ 07: ಬೆಳೆ ಕಟಾವು ಪ್ರಯೋಗಗಳನ್ನು ನಿಖರವಾಗಿ ನಡೆಸುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ದತ್ತಾಂಶ ಮತ್ತು ಇಳುವರಿಯನ್ನು ನಿಖರವಾಗಿ ದಾಖಲಿಸಿ ಎಂದು ಇಂಡಿ ತಾಲೂಕು ದಂಡಾಧಿಕಾರಿ ಬಿ ಎಸ್ ಕಡಕಬಾವಿ ಹೇಳಿದರು.ಅವರು ಇಂಡಿ ತಾಲ್ಲೂಕಿನ ತಡವಲಗಾ ಹಾಗೂ ಗಣವಲಗಾ ಗ್ರಾಮದ ಮುಂಗಾರು ಹಂಗಾಮಿನ ತೋಗರಿ (ಮಳೆಯಾಶ್ರಿತ) ಬೆಳೆಯ ನಮೂನೆ 2ರ ಕಟಾವು ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಿ ಮಾತನಾಡಿದ ಅವರು ರೈತರು ಈ ದೇಶದ ಬೆನ್ನೆಲುಬು ರೈತರು ಶ್ರಮ ಪಟ್ಟು ದುಡಿದು ಫಸಲು ಬೆಳೆಸಿರುತ್ತಾರೆ, ಆದರೆ ಪ್ರಕೃತಿ ವಿಕೋಪದಿಂದ ಹಾಗೂ ಹವಾಮಾನ ವೈಪರೀತ್ಯದಿಂದ ರೈತರು ಕಷ್ಟ ಪಟ್ಟು ಬೆಳೆದಿರುವ ಬೆಳೆ ಕಳೆದುಕೊಂಡು ತುಂಬಾ ಸಂಕಷ್ಟದಲ್ಲಿ ಸಿಲುಕುತ್ತಾರೆ.
ಇದನ್ನು ಮನಗೊಂಡ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಭೀಮಾ ಫಸಲು ಯೋಜನೆಯಡಿಯಲ್ಲಿ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ನೊಂದ ರೈತರಿಗೆ ನ್ಯಾಯಯುತ ಬೆಳೆ ವಿಮೆ ಯೋಜನೆಯ ಲಾಭವನ್ನು ರೈತರಿ ಪ್ರಾಮಾಣಿಕತೆಯಿಂದ ತಲುಪಬೇಕು ಎಂಬ ಸದಿಚ್ಛೇಯಿಂದ ನಾನೇ ಸ್ವತಃ ರೈತರ ಹೊಲಗಳಿಗೆ ಹೋಗಿ ಬೆಳೆಯ ಕಟಾವು ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುವುದರ ಮೂಲಕ ರೈತರಿಗೆ ನ್ಯಾಯಯುತ ವಿಮೆ ಯೋಜನೆಯ ಲಾಭವನ್ನು ಪಡೆಯಲು ಸಹಕರಿಸುತ್ತಿದ್ದಾರೆ . ಇಂಡಿ ತಹಶೀಲದಾರ ಬಿ ಎಸ್ ಕಡಕಬಾವಿ ಅವರ ಈ ಕಾರ್ಯಕ್ಕೆ ರೈತರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಡೊಳ್ಳಿ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಾಹಾತೇಶ ಗುರುಭೆಟ್ಟಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಮಾದೇವ ನೇಂದ್ಯಾಳ ಸೈಫನ್ ಬಾಗವಾನ ಮಳಸಿದ್ದಪ್ಪ ಪೂಜಾರಿ ಸಿದ್ದಣ್ಣ ಮಿರ್ಜಿ ಹಣಮಂತ ತಳವಾರ ಹಾಗೂ ವಿಮೆ ವರ್ಗ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 