ಬೆಳೆ ವಿಮಾ ಯೋಜನೆ: ಕಂತು ಪಾವತಿಸಲು ಜೂ.30 ಕೊನೆಯ ದಿನ

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾನಾನ ಆಧಾರಿತ ತೋಟಗಾರಿಕೆ ಬೆಳೆ ವಿಮಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಮೆ ಕಂತು ಪಾವತಿಸಲು ಜೂನ್ 30 ಕೊನೆಯ ದಿನವಾಗಿದ್ದು, ರೈತರು ತಪ್ಪದೇ ವಿಮೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಕೋರಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನ ಕುರಿತು ಹಾಗೂ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಟರ್ಮಶೀಟ್ಗಳ ಅನುಮೋದನೆಗಾಗಿ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸತತವಾಗಿ ಬರಗಾಲ, ಅತೀವೃಷ್ಟಿ, ಅನಾವೃಷ್ಟಿ ಆವರಿಸುತ್ತಿದ್ದು, ರೈತರು ತೋಟಗಾರಿಕೆ ಬೆಳೆಗೆ ಬೆಳೆ ವಿಮೆಗೆ ಒಳಪಡಿಸುವಂತೆ ಮಾಡಬೇಕು. ರೈತರು ಪ್ರತಿಯೊಂದು ಬೆಳೆಯ ವಿಮಾ ಸರಿಯಾಗಿ ಭರಿಸಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ತೋಟಗಾರಿಕೆ ಉಪನಿದರ್ೇಶಕರಾದ ಪ್ರಭುರಾಜ ಹಿರೇಮಠ ಮಾತನಾಡಿ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗೆ 128 ಅಧಿಸೂಚಿತ ಗ್ರಾಮ ಪಂಚಾಯತಿಗಳಿದ್ದು, ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ರೂ.127000 ಇದ್ದು ಪ್ರತಿ ಹೆಕ್ಟೇರ್ಗೆ ರೂ.6350 ವಿಮಾ ಕಂತು ಪಾವತಿಸತಕ್ಕದ್ದು. ವಿಮಾ ಕಂತು ಪಾವತಿಸಲು ಕೊನೆಯ ದಿನ ಜೂನ್ 30 ಆಗಿದೆ. ಅದೇ ರೀತಿ ಮುಂಗಾರು ಹಂಗಾಮಿಗೆ ಕನರ್ಾಟಕ ರೈ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈರುಳ್ಳಿ (ನೀರಾವರಿ) (ಮಳೆ ಆಶ್ರಿತ), ಕೆಂಪು ಮೆಣಸಿನಕಾಯಿ (ನಿರಾವರಿ, ಮಳೆ ಆಶ್ರಿತ) ಹಾಗೂ ಅರಿಷಿಣ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ ಈರುಳ್ಳಿ ಬೆಳೆಗೆ ವಿಮೆ ಕಂತು ಪಾವತಿಸುವ ಕೊನೆಯ ದಿನ ಆಗಸ್ಟ 14, ಕೆಂಪು ಮೆಣಸಿನಕಾಯಿ (ನೀರಾವರಿ) ಜುಲೈ 31, ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ) ಆಗಸ್ಟ 14 ಹಾಗೂ ಅರಿಷಿಣ ಬೆಳೆಗೆ ಜುಲೈ 31 ಕೊನೆಯ ದಿನವಾಗಿದೆ ಎಂದರು.

ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಕಂತಿನ ಮೊತ್ತ ಒಂದೇ ಆಗಿದೆ. ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯ ಅನುಷ್ಠಾನಕ್ಕಾಗಿ ರೈತರು ಪಹಣಿ, ಆಧಾರ, ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿ, ಸ್ವಯಂ ಘೋಷಿತ ಬೆಳೆ ವಿವರವನ್ನು ಹತ್ತಿರದ ಬ್ಯಾಂಕ್ಗಳಲ್ಲಿ ನೀಡಿ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಗೆ ಓರಿಯೆಂಟಲ್ಇನ್ಸೂರನ್ಸ್ ಕಂಪನಿ ಹಾಗೂ ಕನರ್ಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ ಫ್ಯೂಚರ ಜೆನೆರಾಲಿ ಇಂಡಿಯಾ ಇನ್ಸೂರನ್ಸ್ ಕಂಪನಿ ಅಧಿಸೂಚಿತ ವಿಮಾ ಕಂಪನಿಗಳಾಗಿವೆ ಎಂದು ತಿಳಿಸಿದರು. ಸಭೆಯಲ್ಲಿ ತಾಲೂಕಾ ತೋಟಗಾರಿಕಾ ಸಹಾಯಕ ನಿದರ್ೇಶಕರು ಉಪಸ್ಥಿತರಿದ್ದರು.