ರಮೇಶ ಜಾರಕಿಹೊಳಿಯವರ ವಯಸ್ಸು, ಸ್ಥಾನಮಾನ ಗಮನಿಸಿ ಟೀಕೆ ಮಾಡಿ: ಬಾಗೆನ್ನವರ
Criticize Ramesh Jarkiholi considering his age and status: Bagennavara
ರಮೇಶ ಜಾರಕಿಹೊಳಿಯವರ ವಯಸ್ಸು, ಸ್ಥಾನಮಾನ ಗಮನಿಸಿ ಟೀಕೆ ಮಾಡಿ: ಬಾಗೆನ್ನವರ
ಅಥಣಿ 23: ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ಶಾಸಕರ ಗುಂಪಿನ ನಾಯಕತ್ವ ವಹಿಸಿಕೊಂಡು ಬಿಜೆಪಿಗೆ ಪಕ್ಷಾಂತರ ಮಾಡಿದ ಪರಿಣಾಮವೇ ನಿಮ್ಮ ತಂದೆ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವುದನ್ನು ಚಿದಾನಂದ ಸವದಿ ಅರಿತುಕೊಂಡು ರಮೇಶ ಜಾರಕಿಹೊಳಿ ಕುರಿತು ಟೀಕೆ ಮಾಡಬೇಕು ಇದೇ ರೀತಿ ಮಾತನಾಡಿದಲ್ಲಿ ರಸ್ತೆ ಮೇಲೆ ತಿರಗ್ಯಾಡುವುದೇ ಕಷ್ಟಕರವಾದೀತು ಎಂದು ಚಿದಾನಂದ ಸವದಿಯವರಿಗೆ ತಾಲೂಕಾ ಮುಖಂಡ ಸತ್ಯಪ್ಪಾ ಬಾಗೆನ್ನವರ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಡು ಭಾಷೆಯಲ್ಲಿ ಮಾಡಿದ ಟೀಕೆಗೆ ನಿಮ್ಮ ತಂದೆ ಲಕ್ಷ್ಮಣ ಸವದಿಯವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ಒಂದೇ ವಯಸ್ಸಿನವರು ಅವರಿಬ್ಬರು ಒಬ್ಬರಿಗೊಬ್ಬರು ಮಾತನಾಡಲಿ ಅದಕ್ಕೆ ನಮ್ಮ ವಿರೋಧ ಇಲ್ಲ ಆದರೆ ರಮೇಶ ಜಾರಕಿಹೊಳಿಯವರ ವಯಸ್ಸು, ಸ್ಥಾನಮಾನಕ್ಕೆ ಸಮಾನರಲ್ಲದ ನೀವು ಟೀಕೆ ಮಾಡುವುದು ನಿಮ್ಮ ಕೀಳ ಮನಸ್ಥಿತಿ ತೋರಿಸುತ್ತದೆ ಎಂದರು.
2018ರ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ತಂದೆ ಲಕ್ಷ್ಮಣ ಸವದಿಯವರೇ ಮೊದಲಬಾರಿಗೆ ಗೋಕಾಕ ಮತ್ತು ಬಬಲೇಶ್ವರ ಕ್ಷೇತ್ರಗಳಿಗೆ ಹೋಗಿ ರಮೇಶ ಜಾರಕಿಹೊಳಿ ಮತ್ತು ಎಮ್.ಬಿ.ಪಾಟೀಲರ ವಿರುದ್ಧ ಮಾತನಾಡಿದ್ದರು. ಹೀಗಾಗಿಯೇ ಅಥಣಿ ಕ್ಷೇತ್ರಕ್ಕೆ ಅನಿವಾರ್ಯವಾಗಿ ರಮೇಶ ಜಾರಕಿಹೊಳಿ ಪ್ರವೇಶ ಮಾಡಬೇಕಾಯಿತು ಎನ್ನುವುದನ್ನು ತಿಳಿದುಕೊಳ್ಳಲಿ ಎಂದರು.
ಜಾರಕಿಹೊಳಿ ಮನೆತನದ ಯುವ ಪೀಳಿಗೆಯ ಪ್ರೀಯಾಂಕಾ ಜಾರಕಿಹೊಳಿ ಸಂಸದೆಯಾಗಿ, ರಾಹುಲ ಜಾರಕಿಹೊಳಿ ಕೆಪಿಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರಾಗಿ, ಅಮರನಾಥ ಜಾರಕಿಹೊಳಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ನಿಮ್ಮಂತೆ ಕೀಳಾಗಿ ಯಾರನ್ನೂ ಟೀಕಿಸಿಲ್ಲ ಎಂದ ಅವರು ಇದೇ ರೀತಿ ನೀವು ಮುಂದುವರೆದಲ್ಲಿ ನಾವು ಕೂಡ ತಕ್ಕ ಉತ್ತರ ನೀಡುತ್ತೇವೆ ಮತ್ತು ನೀವು ಅಥಣಿ ರಸ್ತೆಗಳ ಮೇಲೆ ತಿರಗ್ಯಾಡುವುದು ಕಷ್ಟಕರವಾಗುತ್ತದೆ ಎಂದು ಬಾಗೆನ್ನವರ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಧುರೀಣರಾದ ನಿಶಾಂತ ದಳವಾಯಿ, ಅಶೋಕ ಯಲಿಹಡಲಗಿ ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 