ವಿಜಯಪುರ ಜೂ.02 : ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರನ್ನು ಸಾಂಸ್ಥಿಕ ಕ್ವಾರಂಟೈನ್ ನಂತರ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ ಪಾಟೀಲ ಅವರು ತಿಳಿಸಿದ್ದಾರೆ.
ಅದರಂತೆ ಹೋಮ್ ಕ್ವಾರಂಟೈನ್ ಅವಧಿ ಮತ್ತು ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತಹವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷತೆಯಲ್ಲಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಗ್ರಾಮ ಲೆಕ್ಕಾಧಿಕಾರಿಗಳು, ಬೀಟ್ ಪೊಲೀಸ್, ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು ಒಳಗೊಂಡ ರಚಿಸಲಾಗಿರುವ ಗ್ರಾಮ ಕಾರ್ಯಪಡೆ ಸಮಿತಿಗಳು ಕೂಡಾ ಬೇರೆ-ಬೇರೆ ರಾಜ್ಯಗಳಿಂದ ಅಧಿಕೃತವಾಗಿ ಮತ್ತು ಮಾಹಿತಿಯಿಲ್ಲದೆ ಬಂದವರ ಬಗ್ಗೆ ನಿಗದಿತ ಮಾಹಿತಿ ನೀಡುವ ಜೊತೆಗೆ ಸಂಬಂಧಪಟ್ಟವರನ್ನು ಸಾಂಸ್ಥಿಕ ಮತ್ತು ಹೋಮಕ್ವಾರಂಟೈನ್ ಮಾಡಲು ಸಹ ಅವರು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೆ 135 ಕ್ವಾರಂಟೈನ್ ಕೇಂದ್ರಗಳಲ್ಲಿ 3500 ಜನರು ಸಾಂಸ್ಥಿಕ ಕ್ವಾರಂಟೈನ್ದಲ್ಲಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಹೋಮ್ಕ್ವಾರಂಟೈನ್ ನೋಡಲ್ ಅಧಿಕಾರಿಯಾಗಿ ಪ್ರತಿ ತಾಲೂಕಿಗೆ ಒಬ್ಬರಂತೆ 12 ಜನ ಹಿರಿಯ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದಿಂದ ಬಂದವರಲ್ಲಿ ಒಟ್ಟು 67 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, 6 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇವರಿಗೆ ಸಂಬಂಧಪಟ್ಟಂತೆ ಸಕರ್ಾರದ ಹೊಸ ನಿದರ್ೇಶನದಂತೆ ಪಾಸಿಟಿವ್ ಪ್ರಕರಣ ದೃಡಪಟ್ಟ ಜಿಲ್ಲೆಯ 15 ಗ್ರಾಮಗಳನ್ನು 15 ಕಂಟೇನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದಿಂದ ಮರಳಿದ ಜನರಿಗೆ ಸೀಮಿತವಾಗಿ ಸ್ಥಾಪಿಸಲಾದ ಈ 15 ಕಂಟೇನ್ಮೆಂಟ್ ವಲಯಗಳು ಈ ಕೆಳಗಿನಂತಿವೆ. ಬರಡೋಲ್ (ಚಡಚಣ), ಮುಳಸಾವಳಗಿ (ದೇವರಹಿಪ್ಪರಗಿ), ಇಂಗಳಗಿ(ದೇವರಹಿಪ್ಪರಗಿ), ಕುಂಟೋಜಿ(ಮುದ್ದೇಬಿಹಾಳ), ಮಾರಡಗಿ ಎಲ್.ಟಿ(ನಿಡಗುಂದಿ), ಆಲಮೇಲ್(ಸಿಂದಗಿ), ಗಣಿಹಾರ(ಸಿಂದಗಿ), ಗುತ್ತರಗಿ(ಸಿಂದಗಿ), ಕೋರಳ್ಳಿ (ಸಿಂದಗಿ) ಮಾದನಳ್ಳಿ(ಸಿಂದಗಿ), ನೀರಲಗಿ(ತಾಳಿಕೋಟಿ), ಲಿಂಗದಳ್ಳಿ(ತಾಳಿಕೋಟಿ), ತಮದಡ್ಡಿ(ತಾಳಿಕೋಟಿ), ಬರಟಗಿ(ತಿಕೋಟಾ), ಕಪ್ನಿಂಬರಗಿ(ಇಂಡಿ) ಗ್ರಾಮಗಳನ್ನು ಕಂಟೇನ್ಮೆಂಟ್ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಿಂದ ಮೂರು ಕೋವಿಡ್ ಪಾಸಿಟಿವ್ ಗುಣಮುಖ ರೋಗಿಗಳ ಬಿಡುಗಡೆ : ಇಂದು ಜಿಲ್ಲಾಸ್ಪತ್ರೆಯಿಂದ ಮೂವ್ವರು ಕೋವಿಡ್-19 ಪಾಸಿಟಿವ್ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ರೋಗಿ ಸಂಖ್ಯೆ - 2337 (40 ವರ್ಷದ ಪುರುಷ), ರೋಗಿ ಸಂಖ್ಯೆ - 2342 (29 ವರ್ಷದ ಪುರುಷ) ಹಾಗೂ ರೋಗಿ ಸಂಖ್ಯೆ - 2411 (16 ವರ್ಷದ ಬಾಲಕಿ) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.