ಬೆಂಗಳೂರು, ಫೆ.1 : ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ10 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚೇತನ್, ಹೆಚ್. ಅರವಿಂದ್, ನಿತಿನ್, ಮಹಮ್ಮದ್ ಫಹಾದ್, ನವೀನ್, ಲಕ್ಷ್ಮಣ್ ದಾಸ್, ಪ್ರತೀಕ್, ಪವನ್, ಕಿಶನ್ ಹಾಗೂ ವೈಭವ್ ಬಂಧಿತ ಆರೋಪಿಗಳು.
ನಿನ್ನೆ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಟಿ20 ಪಂದ್ಯದ ಫಲಿತಾಂಶದ ಕುರಿತು ನಗರದ ಲ್ಯಾವೆಲ್ಲೇ ರಸ್ತೆಯ ಟೆಕ್ನೋ ಹ್ಯಾಂಗ್ ಔಟ್ ಕ್ಲಬ್‌ನಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 87,200 ರೂ. ಹಾಗೂ 10 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ.