ಕಂಪ್ಯೂಟರ್ ಜ್ಞಾನದಿಂದ ಅವಕಾಶ ಸೃಷ್ಠಿ: ಮೂಗನೂರಮಠ
Creating Opportunities Through Computer Knowledge: Mooganuramatha
ಲೋಕದರ್ಶನ ವರದಿ
ಬಾಗಲಕೋಟೆ 05 : ಕಂಪ್ಯೂಟರ್ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ಹೊಸ ಆಲೋಚನೆಗಳನ್ನು ಸೃಷ್ಟಿಸುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಶಕ್ತಿಯಾಗಿದೆ ಎಂದು ಪ್ರಾಚಾರ್ಯರಾದ ಎಸ್. ಆರ್.ಮೂಗನೂರಮಠ ಹೇಳಿದರು.
ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಂಪ್ಯೂಟರ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಜಗತ್ತು ವೇಗವಾಗಿ ಡಿಜಿಟಲೀಕರಣದತ್ತ ಸಾಗುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ಆರೋಗ್ಯ, ಕೃಷಿ, ಕೈಗಾರಿಕೆ, ಸರ್ಕಾರಿ ಸೇವೆಗಳು ಸೇರಿದಂತೆ ಪ್ರತಿ ಕ್ಷೇತ್ರದಲ್ಲೂ ಕಂಪ್ಯೂಟರ್ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ,
ಕಂಪ್ಯೂಟರ್ ಕೌಶಲ್ಯ, ಡೇಟಾ ವಿಶ್ಲೇಷಣೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಆನ್‌ಲೈನ್ ಕೋರ್ಸ್‌ಗಳು, ಡಿಜಿಟಲ್ ಗ್ರಂಥಾಲಯಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ನಿಮ್ಮ ಕನಸುಗಳಿಗೆ ಕಂಪ್ಯೂಟರ್ ಜ್ಞಾನವು ರೆಕ್ಕೆಯಾಗಲ್ಲಿ ಎಂದರು.
ಬಹುಮಾನ ವಿತರಣೆ : ಕಾರ್ಯಕ್ರಮದ ಅಂಗವಾಗಿ ವಿಭಾಗದ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸಲು ಹಾಗೂ ಮನರಂಜನೆಗಾಗಿ ಹಮ್ಮಿಕೊಂಡಿದ್ದ ಸಾಧ್ಯವಿದ್ದರೆ ನನ್ನನ್ನು ಹುಡುಕಿ, ಹಿಂಬದಿಯಿಂದ ಫುಟ್ ಬಾಲ್ ಒದೆಯುವುದು, ಪುಟ್ ಅ ಸ್ಟಿಕ್ ಇನ್ ದಿ ಬಾಟಲ್ ವಿತ್ ಅ ಮಿರರ್, ಗ್ಲಾಸು ಮತ್ತು ಸಂಗೀತ, ತಕ್ಷಣದ ಸ್ಮೃತಿ, ಸೃಜನಶೀಲತೆಯನ್ನು ತೋರಿಸುವುದು ಸೇರಿದಂತೆ ವಿವಿಧ ಮಾನಸಿಕ ಸಾಮರ್ಥ್ಯದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ನಟರಾಜ ಇಂಗಳಗಿ, ಪ್ರಾಧ್ಯಾಪಕರಾದ ಡಾ.ಕೆ.ವಿ. ಮಠ, ಡಾ.ಎಂ.ಎಚ್.ವಡ್ಡರ, ಎಮ್.ಆಯ್.ಕಂಬಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 