ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನದಡಿ ನಿಷ್ಕ್ರೀಯ ಖಾತೆಗಳನ್ನು ಸಕ್ರಿಯಗೊಳಿಸಲು ಜಾಗೃತಿ ಮೂಡಿಸಿ

ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನದಡಿ ನಿಷ್ಕ್ರೀಯ ಖಾತೆಗಳನ್ನು ಸಕ್ರಿಯಗೊಳಿಸಲು ಜಾಗೃತಿ ಮೂಡಿಸಿ  Create awareness to activate dormant accounts under the Your Money Your Rights campaign

ವಿಜಯಪುರ ನ.29: ಎಲ್ಲ ಬ್ಯಾಂಕುಗಳು ತಮ್ಮಲ್ಲಿರುವ ನಿಷ್ಕ್ರಿಯ ಠೇವಣಿಗಳನ್ನು ಹತ್ತು ವರ್ಷಗಳ ತರುವಾಯ, ರಿಸರ್ವ್‌ ಬ್ಯಾಂಕ್‌ಗೆ ರವಾನಿಸುತ್ತಾರೆ. ಆದ್ದರಿಂದ ಬಾಕಿ ಇರುವ ನಿಷ್ಕ್ರೀಯ ಖಾತೆಗಳನ್ನು ಸಮಾಪನೆಗೊಳಿಸುವ ಅಥವಾ ಅಗತ್ಯ ದಾಖಲೆಗಳನ್ನು ಕೆವೈಸಿ ಮಾಡಿಕೊಳ್ಳುವ ಮೂಲಕ ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸುವ ವ್ಯವಸ್ಥೆಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಎಲ್ಲಾ ಬ್ಯಾಂಕಿನ ಮ್ಯಾನೇಜರ ಅವರಿಗೆ ಅಗ್ರಣೀಯ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಬಿ ಸಿದ್ದಯ್ಯ ಅವರು ಹೇಳಿದರು. 

ಅವರು ಶನಿವಾರ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಆಯೋಜಿಸಿದ್ದ ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ,ಮಾತನಾಡಿದರು.  

ಭಾರತೀಯ ರಿಸರ್ವ್‌ ಬ್ಯಾಂಕಿನ ಮುಖ್ಯ ಅಭಿವೃದ್ಧಿ ಅಧಿಕಾರಿಗಳಾದ ಮೊನಿ ರಾಜ ಬ್ರಹ್ಮ ಅವರು ಮಾತನಾಡಿ, ರಿಸರ್ವ್‌ ಬ್ಯಾಂಕಿನಿಂದ ನಿಷ್ಕ್ರಿಯ ಠೇವಣಿಗಳನ್ನು ಸಕ್ರಿಯಗೊಳಿಸಿಕೊಳ್ಳಲು ಗ್ರಾಹಕರು ಹಾಗೂ ಬ್ಯಾಂಕಿನವರು ಅನುಸರಿಸಬೇಕಾದ ಕಾರ್ಯವಿಧಾನಗಳ ಕುರಿತು ವಿಸೃತ್ತವಾಗಿ ವಿವರಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ ಮಾತನಾಡಿದರು. ಅಗ್ರಣೀಯ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ನಾಗಾರ್ಜುನ, ಎಲ್ಲ ಬ್ಯಾಂಕುಗಳ ಪ್ರಬಂಧಕರು, ವಿವಿಧ ಇಲಾಖೆಯ ಅಧಿಕಾರಿ,ಸಿಬ್ಬಂದಿಗಳು ಉಪಸ್ಥಿತರಿದ್ದರು.