ಮುಂಡಗೋಡದಲ್ಲಿ ಮೆಡಿಕಲ್ ಮುಷ್ಕರಕ್ಕೆ ಬಿರುಕು; ಶಟರ್ ಡೌನ್, ವ್ಯಾಪಾರ ಆನ್

ಮುಂಡಗೋಡದಲ್ಲಿ ಮೆಡಿಕಲ್ ಮುಷ್ಕರಕ್ಕೆ ಬಿರುಕು; ಶಟರ್ ಡೌನ್, ವ್ಯಾಪಾರ ಆನ್  Crack in medical strike in Mundagoda; Shutters down, business on


ಲೋಕದರ್ಶನ ವರದಿ  

ಮುಂಡಗೋಡ 21 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಓಷಧ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಮುಂಡಗೋಡ ತಾಲೂಕಿನ ಓಷಧ ವ್ಯಾಪಾರಿಗಳೂ ಬೆಂಬಲ ಸೂಚಿಸಿದ್ದರು. ತಾಲೂಕಿನಾದ್ಯಂತ ಎಲ್ಲಾ ಮೆಡಿಕಲ್ ಅಂಗಡಿಗಳು ಬಂದ್ ಆಗಲಿವೆ ಎಂದು ಓಷಧ ವ್ಯಾಪಾರಿ ಸಂಘದ ಅಧ್ಯಕ್ಷ  ನೇಮಿರಾಜ್ ಚಿವಟೆ ಮುಂಚಿತವಾಗಿ ಮಾಹಿತಿ ನೀಡಿದ್ದರು. ಆದರೆ ಮುಷ್ಕರದ ದಿನವೇ ಪಟ್ಟಣದ  ಹುಬ್ಬಳ್ಳಿ ಶಿರಸಿ ಹೋಗುವ ರಸ್ತೆಯಲ್ಲಿ ಕೆಲ ಸಮಯದಲ್ಲಿ ಶಟರ್ ಅರ್ಧಕ್ಕೆ ಇಳಿಸಿ ಓಷಧ ಮಾರಾಟ ನಡೆಸಲಾಗುತ್ತಿದೆ. ಎಂಬ ಆರೋಪ ಕೇಳಿಬಂದಿದೆ.  

ಬಹುತೇಕ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದ ಸಂದರ್ಭದಲ್ಲೇ, ಕೆಲ ಗ್ರಾಹಕರು ಅಂಗಡಿಯೊಳಗೆ ತೆರಳಿ ಓಷಧ ಪಡೆದುಕೊಳ್ಳುತ್ತಿರುವ ದೃಶ್ಯ  ಕಂಡು ಬಂದಿವೆ. ಇದರಿಂದ ಮುಷ್ಕರದ ಉದ್ದೇಶಕ್ಕೆ ಧಕ್ಕೆ ಉಂಟಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ, ಇನ್ನೂ ಕೆಲವರು “ಮುಷ್ಕರಕ್ಕೆ ಬೆಂಬಲ ಸೂಚಿಸಿದಂತೆ ತೋರಿಸಿ ಗುಪ್ತವಾಗಿ ವ್ಯಾಪಾರ ಮಾಡುತ್ತಿದ್ದರು. “ಹೊರಗೆ ಬಂದ್ ಎಂಬಂತೆ ತೋರಿಸಿ, ಒಳಗೆ ವ್ಯಾಪಾರ ನಡೆಸಲಾಗುತ್ತಿದೆ” ಎಂಬ ಆರೋಪಗಳೂ ಕೇಳಿಬಂದಿದ್ದು, ಈ ಘಟನೆ ಪಟ್ಟಣದಲ್ಲಿ ಚರ್ಚೆಗೆ ಕಾರಣವಾಗಿದೆ ಈ ಕುರಿತು ಓಷಧ ವ್ಯಾಪಾರಿ ಸಂಘ ಅಥವಾ ಸಂಬಂಧಪಟ್ಟ ಅಂಗಡಿ ಮಾಲೀಕರಿಂದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಘಟನೆ ಪಟ್ಟಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಷ್ಕರದ ನಿಯಮ ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.