ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ.
ಕೊವಿಡ್ ವಿರೋಧಿ ಲಸಿಕ ಮೊದಲು ಪಡೆದವ ಬಾಲಚಂದ್ರ
ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಲಸಿಕೆ ವಿತರಣೆಯಿಂದ ಯಾವುದೇ ಅವಘಡಗಳು ಸಂಭವಿಸಿಲ್ಲ. ಲಸಿಕೆ ಉತ್ತಮವಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರದಿರುವುದು ಸಾಭಿತಾಗಿದೆ. ಹೀಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆಯಬೇಕು.
ಅಲ್ಲದೇ ವ್ಯಾಕ್ಸಿನ್ ತೆಗೆದುಕೊಂಡವರಿಗೆ ಹಾಗೂ ಲಸಿಕಾ ವಿರಣೆ ಅಭಿಯಾನದ ಯಶಸ್ವಿಗೆ ಶ್ರಮಿಸಿದ ಆರೋಗ್ಯ ಇಲಾಖೆಯ ಪ್ರತಿಯೊಬ್ಬರಿಗೂ ಅಭಿನಂದಿಸಿದರು.
-ಡಾ. ಕೆ. ಹರೀಶ್‌ಕುಮರ್ , ಉತ್ತರಕನ್ನಡ ಜಿಲ್ಲಾಧಿಕಾರಿ.
..........................
ನಮ್ಮ ಆಸ್ಪತ್ರೆಯ ಸಿಬ್ಬಂದಿ ಲಸಿಕೆ ಪಡೆದು ಅರ್ಧಗಂಟೆ ವಿಶ್ರಾಂತಿ ಪಡೆದರು. ಯಾರಿಗೂ ತೊಂದರೆ ಆಗಿಲ್ಲ. ನಾವೀಗ ನಿರ್ಭಿತಿಯಿಂದ ಕೋವಿಡ್ ಪೀಡಿತರಿಗೆ ಚಿಕಿತ್ಸೆ ಕೊಡಬಹುದು. ಆರಂಭದಲ್ಲಿ ಆರು ತಾಸು ಪಿಪಿ ಕಿಟ್ ಹಾಕಿಕೊಂಡು ಚಿಕಿತ್ಸೆ ಕೊಡುವುದು ಕಷ್ಟವಾಗಿತ್ತು. ನಮಗೂ ಕೋವಿಡ್ ಬರುವ ಭಯ ಇತ್ತು. ಈಗ ಲಸಿಕೆ ಬಂದಿದೆ. ಈಗ ಭಯವಿಲ್ಲ.
- ಲಕ್ಷ್ಮಿ ಕೋಣೇಸರ. ಹೆಡ್ ಮಾರ್ಟನ್. ಕ್ರಿಮ್ಸ ಆಸ್ಪತ್ರೆ. ಕಾರವಾರ.
..................
ಕೋವಿಡ್ ಲಸಿಕೆ ಪಡೆಯುವಾಗ ಸ್ವಲ್ಪ ಆತಂಕ ಇತ್ತು. ಆದರೆ ಪಡೆದ ನಂತರ ಏನೂ ಆಗಲಿಲ್ಲ. ಈಗ ಖುಷಿಯಿಂದ ಇದ್ದೇನೆ
- ಬಾಲಚಂದ್ರ ಶಿರೋಡ್ಕರ್.
(ಕೊವಿಡ್ ಮೊದಲ ಲಸಿಕೆ ಪಡೆದವರು. ಡಿ ಗ್ರೂಪ್ ನೌಕರ ಕಾರವಾರ)