ಕೋವಿಡ್ ಲಸಿಕ ನೀಡಿಕೆ ಪ್ರಕ್ರಿಯೆಗೆ ಚಾಲನೆ ; ಮೊದಲ ಲಸಿಕೆ ಬಾಲಚಂದ್ರ ಶಿರೋಡ್ಕರಗೆ
ಕಾರವಾರ ಜ. 16 : ಕೊರೊನಾ ಸೋಂಕಿನಿಂದ ಹೋರಾಡುವ ನಿಟ್ಟಿನಲ್ಲಿ ಶನಿವಾರ ಕಾರವಾರ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.
ಲಸಿಕೆ ನೀಡುವ ಮುನ್ನ ಶಾಸಕಿ ರೂಪಾಲಿ ನಾಯ್ಕ ಅವರು ಸಿದ್ಧತೆಗಳನ್ನು ವೀಕ್ಷಿಸಿದರು.
ಕಾರವಾರ ಮೆಡಿಕಲ್ ಕಾಲೇಜಿನ
ಕೊರೋನಾ ಲಸಿಕೆ ಕೇಂದ್ರ ಹಾಗೂ ನೋಂದಣಿ ಕೊಠಡಿಯನ್ನು ಖುದ್ದಾಗಿ ಕಂಡು, ಮಾಹಿತಿ ಪಡೆದುಕೊಂಡರು.
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರಪ್ರಸಾರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು , ಜಿಪಂ ಸಿಇಓ ಪ್ರಿಯಾಂಗಾ ಎಂ. , ಅಪರ ಜಿಲ್ಲಾಧಿಕಾರಿ ಹೆಚ್. ಕೆ .ಕೃಷ್ಣಮೂರ್ತಿ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಗಜಾನನ ನಾಯಕ , ಜಿಲ್ಲಾ ಆರೋಗ್ಯಧಿಕಾರಿ ಡಾ. ಶರದ ನಾಯಕ ಇನ್ನಿತರ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಮೊದಲ ದಿನ 438 ಜನ ಆರೋಗ್ಯ ಸಿಬ್ಬಂದಿಗೆ ಲಸಿಕೆ:
ಜಿಲ್ಲೆಯ 11 ಲಸಿಕಾ ಕೇಂದ್ರಗಳಲ್ಲಿ ಗ್ರೂಪ್ ಡಿ ಸಿಬ್ಬಂದಿ,ನರ್ಸ್,ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಸೇರಿದಂತೆ ಈ ವರೆಗೆ 438 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆದವರಿಗೆ 28 ದಿನಗಳ ನಂತರ ಮತ್ತೆ ಎರಡನೇ ಡೊಸ್ ಪಡೆಯಲು ಆಗಮಿಸಬೇಕು ಎಂದು ಸೂಚಿಸಲಾಯಿತು. ಲಸಿಕ ಪಡೆದವರಿಗೆ ಮತ್ತೆ ಎಸ್ ಎಂಎಸ್ ಸಂದೇಶ ಕಳುಹಿಸಲಾಗುತ್ತದೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಮತ್ತು ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್‍ನಿಂದ ಆಗಾಗ ಕೈಗಳ ಸ್ವಚ್ಛಗೊಳಿಸುವಿಕೆ ಕೆಲಸ ಮಾಡಬೇಕು ಎಂದು ವೈದ್ಯರು ಲಸಿಕೆ ಹಾಕಿಸಿಕೊಂಡವರಿಗೆ ತಿಳಿಸಿದ ದೃಶ್ಯ ಕಂಡು ಬಂದಿತು.
ಅರ್ದ ಗಂಟೆ ಗಹನ :
ಲಸಿಕೆ ಪಡೆದ ನಂತರ ಲಸಿಕೆ ಹಾಕಿಸಿಕೊಂಡವರಿಗೆ ಅಬ್ಸರ್ವೇಶನ್ ಕೊಣೆಯಲ್ಲಿ ಅರ್ಧಗಂಟೆಗಳ ಕಾಲ ನಿಗಾವಹಿಸಿರುವುದುನ್ನು ಕೂಡ ಮಾಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾದ ಬಗ್ಗೆ ವರದಿಯಾಗಿರುವುದಿಲ್ಲ.
ಮೊದಲ ಲಸಿಕೆ ಗ್ರೂಪ್ ಡಿ ನೌಕರ ಬಾಲಚಂದ್ರಗೆ :
ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಗ್ರೂಪ್ ಡಿ ನೌಕರ ಬಾಲಚಂದ್ರ ಶಿರೋಡ್ಕರ್ ( 43 ವರ್ಷ) ಕೋವಿಡ್-19 ಪ್ರಥಮ ಲಸಿಕೆಯನ್ನು ಕಾರವಾರ ಮೆಡಿಕಲ್ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ಪಡೆದರು.
ದಿವ್ಯಾ ಕೃಷ್ಣ ಗುನಗಿ 2ನೇಯವರಾಗಿ ಕೋವ್ಯಾಕ್ಸಿನ್ ಡೋಸ್ ಪಡೆದರೆ , ಛಾಯಾ ದುರ್ಗೇಕರ್ ಅವರು 3ನೇಯವರಾಗಿ ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ.