ಉತ್ತರ ಕನ್ನಡದಲ್ಲಿ ಶನಿವಾರ 156 ಕೊವಿಡ್ ಪ್ರಕರಣ ಪತ್ತೆ :

Karwar medical collage .
ಉತ್ತರ ಕನ್ನಡದಲ್ಲಿ  ಶನಿವಾರ 156 ಕೊವಿಡ್ ಪ್ರಕರಣ ಪತ್ತೆ : 
117  ಜನ ಗುಣಮುಖ ; 4 ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ  ಶನಿವಾರ 156 ಕೊವಿಡ್ ಪ್ರಕರಣ ಪತ್ತೆಯಾಗಿವೆ.  117 ಜನ ಗುಣಮುಖರಾಗಿದ್ದಾರೆ. ಕೊವಿಡ್ ಪಾಜಿಟಿವ್ ಪ್ರಕರಣಗಳ ಪೈಕಿ ಭಟ್ಕಳದಲ್ಲಿ 45 , ಕುಮಟಾ ದಲ್ಲಿ 35 , ಹಳಿಯಾಳದಲ್ಲಿ 35 , ಹೊನ್ನಾವರದಲ್ಲಿ 12  ,ಮುಂಡಗೋಡದಲ್ಲು 8 , ಕಾರವಾರದಲ್ಲಿ 5, ಅಂಕೋಲಾ ದಲ್ಲಿ  8 ಪ್ರಕರಣ ಪತ್ತೆಯಾಗಿವೆ. ಗುಣಮುಖರಾದವರ ಸಂಖ್ಯೆ 117 ಇದೆ. ಕಾರವಾರದಲ್ಲಿ ಇಬ್ಬರು, ಹೊನ್ನಾವರ ,ಜೊಯಿಡಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್ ನಿಂದ ಈತನಕ ಸಾವನ್ನಪ್ಪಿದವರ ಸಂಖ್ಯೆ 157 ತಲುಪಿದೆ. ಈತನಕ ಕೊವಿಡ್ ಒಟ್ಟು ಪ್ರಕರಣ, 11970 ರಷ್ಟಿದ್ದರೆ, ಗುಣಮುಖರಾದವರ ಸಂಖ್ಯೆ  10535 ರಷ್ಟಿದೆ.