ಉತ್ತರ ಕನ್ನಡ ; ಇಂದೂ ಶತಕ ದಾಟಿದ ಕೊವಿಡ್ ಅಜಿಟಿವ್ ಪ್ರಕರಣ
ಕಾರವಾರ: ಜಿಲ್ಲೆಯಲ್ಲಿ ಶನಿವಾರ 117 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 69 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕಾರವಾರದಲ್ಲಿ 43, ಅಂಕೋಲಾ 3, ಭಟ್ಕಳದಲ್ಲಿ 5, ಹೊನ್ನಾವರದಲ್ಲಿ 16, ಶಿರಸಿಯಲ್ಲಿ 2, ಮುಂಡಗೋಡದಲ್ಲಿ 11, ಹಳಿಯಾಳದಲ್ಲಿ 37 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು, ಕಾರವಾರದಲ್ಲಿ 4, ಕುಮಟಾ 10, ಹೊನ್ನಾವರ 2, ಭಟ್ಕಳ 9, ಹಳಿಯಾಳದಲ್ಲಿ 44 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ 2,723 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,852 ಮಂದಿ ಗುಣಮುಖರಾಗಿದ್ದಾರೆ. 26 ಮಂದಿ ಸಾವನ್ನಪ್ಪಿದ್ದು, 845 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.