ಕೋವಿಡ್ -19 ಕಾಯಿಲೆ ಬಗ್ಗೆ ಜಾಗೃತರಾಗಿರುವುದು ಅತ್ಯಗತ್ಯ - ನ್ಯಾಯಾಧೀಶೆ ವಿಪುಲಾ ಪೂಜಾರ

Covid awerness at dist court
ಕೋವಿಡ್ -19 ಕಾಯಿಲೆ ಬಗ್ಗೆ ಜಾಗೃತರಾಗಿರುವುದು ಅತ್ಯಗತ್ಯ - 
ನ್ಯಾಯಾಧೀಶೆ  ವಿಪುಲಾ ಪೂಜಾರ  


ಕಾರವಾರ : ಕೊರೋನಾ ವೈರಸ್ ಯಾರಿಗೂ ಕಾಣದ ವೈರಸ್ ಆಗಿದ್ದು ,  ಇದರ ಹರಡುವಿಕೆ ನಿಯಂತ್ರಣಕ್ಕೆ ಬರಬೇಕಿದೆ. ಕಾರಣ ಈ  ಬಗ್ಗೆ ಎಲ್ಲರೂ ಸದಾ ಜಾಗೃತರಾಗಿರುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ  ನ್ಯಾಯಾಲಯದ    ನ್ಯಾಯಾಧೀಶೆ ವಿಪುಲಾ ಎಂ.ಬಿ.ಪೂಜಾರ  ಹೇಳಿದರು.
 ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಕೋವಿಡ್ - 19 ಜಾಗೃತಿ ಜನಾಂದೋಲನ ಅಭಿಯಾನಕ್ಕೆ ಚಾಲನೆ ನೀಡಿ,  ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. 
 ಮಾರಣಾಂತಿಕ ವೈರಾಣು ಹರಡುವುದನ್ನು ತಡೆಯಲು ಅಗತ್ಯವಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಕೋವಿಡ್ ಹರಡದಿರಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಮತ್ತು ಬೇರೆಯವರು ಕೂಡ ಅದನ್ನು ಅನುಸರಿಸುವಂತೆ 
ತಿಳಿ ಹೇಳಬೇಕು. 
ಸಾರ್ವಜನಿಕರೊಡನೆ ಬೆರೆಯುವಾಗ ಮುಖಕವಚ ಧರಿಸುವುದು, ಕನಿಷ್ಠ 6 ಅಡಿ ಅಂತರ ಕಾಪಾಡಿಕೊಳ್ಳುವುದು ಮತ್ತು ಆಗಾಗ ಕೈಗಳನ್ನು ತೊಳೆಯುವಂತಹ ರೂಢಿ ಮಾಡಿಕೊಳ್ಳಬೇಕೆಂದರು.
ಜಾಗೃತಿ ಜಾಥ: 
ಜಾಗೃತಿ ಜಾಥಾವು ನ್ಯಾಯಾಲಯದ ಆವರಣದಿಂದ ಹೊರಟು ಸುಭಾಸ್ ಸರ್ಕಲ್, ಸವಿತಾ ಹೊಟೇಲ್, ಡಿಎಚ್‍ಒ ಕಚೇರಿ, ಪಿಕಳೆ ರೋಡ್, ಜಿಲ್ಲಾಧಿಕಾರಿ ಕಚೇರಿ ರಸ್ತೆ ಮೂಲಕ ಸಾಗಿ , ಪುನಃ ಕೋರ್ಟ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ಯಾನಲ್ ವಕೀಲರು ಮತ್ತು ಅರೆಕಾಲಿಕ ಸ್ವಯಂಸೇವಕರು ಸೇರಿದಂತೆ ಇತರರು ಹಾಜರಿದ್ದರು