ಕೋವಿಡ್-19 ಸೋಂಕಿತರ ಸಂಖ್ಯೆ 191,000ಕ್ಕೆ ಏರಿಕೆ ; ವಿಶ್ವ ಆರೋಗ್ಯ ಸಂಸ್ಥೆ

ಮಾಸ್ಕೋ,ಮಾ 19, ಕಳೆದ 24 ಗಂಟೆಗಳಲ್ಲಿ  ಜಾಗತಿಕವಾಗಿ ಸುಮಾರು 15,100 ಮಂದಿಗೆ  ನೋವಲ್ ಕೊರೊನೊ ವೈರಸ್ ಹಬ್ಬಿದ್ದು, ಇದರಿಂದಾಗಿ ಒಟ್ಟು  ಕೊರೊನಾ  ದೃಢ ಪಟ್ಟ ಪ್ರಕರಣಗಳ ಸಂಖ್ಯೆ 191,1000 ಕ್ಕೆ ಏರಿಕೆಯಾಗಿದೆ ಎಂದು  ವಿಶ್ವ ಆರೋಗ್ಯ ಸಂಸ್ಥೆ  ತನ್ನ  ಇತ್ತಿಚಿನ ವರದಿಯಲ್ಲಿ  ತಿಳಿಸಿದೆ.ವಿಶ್ವದೆಲ್ಲೆಡೆ  191,000  ಪ್ರಕರಣಗಳು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 15, 123 ಪ್ರಕರಣಗಳು ವರದಿಯಾಗಿದೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.  ಸೋಂಕಿನಿಂದ 786 ಮಂದಿ ಮೃತಪಟ್ಟಿದ್ದು   ಒಟ್ಟು ಸಾವಿನ ಸಂಖ್ಯೆ  7,807ಕ್ಕೆ ಏರಿಕೆಯಾಗಿದೆ.