ಕೋವಿಡ್-19: ಮೆಕ್ಸಿಕೊದಲ್ಲಿ 257 ಸಾವು

ಮೆಕ್ಸಿಕೊ, ಮೇ 8,ಕೋವಿಡ್-19ನಿಂದ ಮೆಕ್ಸಿಕೊದಲ್ಲಿ ಒಂದೇ ದಿನ 257 ಜನರು ಸಾವನ್ನಪ್ಪಿದ್ದು, ಒಟ್ಟ ಸತ್ತವರ ಸಂಖ್ಯೆ 2,961ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದೇ ಅವಧಿಯಲ್ಲಿ ದೃಢಪಡಿಸಿದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,982 ರಿಂದ 29,616 ಕ್ಕೆ ಏರಿದೆ ಎಂದು ಸಚಿವಾಲಯದ ನಿರ್ದೇಶಕ ಜೋಸ್ ಲೂಯಿಸ್ ಅಲೋಮಿಯಾ ಗುರುವಾರ ಹೇಳಿದ್ದಾರೆ. ಬುಧವಾರ ಲ್ಯಾಟಿನ್ ಅಮೆರಿಕ ದೇಶದಲ್ಲಿ ಈ ಸಂಖ್ಯೆ 1,609 ಆಗಿತ್ತು. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇಲ್ಲಿಯವರೆಗೆ, ವಿಶ್ವಾದ್ಯಂತ 3.8 ದಶಲಕ್ಷಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. 2,69,000 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.