ಕೋವಿಡ್-19: ಮೆಕ್ಸಿಕೊದಲ್ಲಿ 1,906 ಹೊಸ ಪ್ರಕರಣ, 199 ಸಾವು

ಮೆಕ್ಸಿಕೊ, ಮೇ 9,ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,906 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 199 ಜನ ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ ಮೆಕ್ಸಿಕೊದಲ್ಲಿ 31,522 ಸೋಂಕಿತರ ಕಾಣಿಸಿಕೊಂಡಿದ್ದು, 3,160 ಜನರು ಸಾವನ್ನಪ್ಪಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಆರ್ಥಿಕತೆ ಸೇರಿದಂತೆ ದೇಶ ಪುನಃ ತೆರೆಯುವ ಕುರಿತು ಸೋಮವಾರ ತಮ್ಮ ಸಂಪುಟದಲ್ಲಿ ಪ್ರಸ್ತಾವನೆ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ. ಗುರುವಾರ ದೇಶದಲ್ಲಿ 1,982 ಪ್ರಕರಣಗಳು ವರದಿಯಾಗಿದ್ದವು, ಅಲ್ಲದೆ 257 ಸಾವು ಸಂಭವಿಸಿತ್ತು. ರೋಗದ ಹರಡುವಿಕೆಯನ್ನು ತಡೆಯಲು ಏಪ್ರಿಲ್ 16 ರಂದು ಸರ್ಕಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮೇ 30 ರವರೆಗೆ ವಿಸ್ತರಿಸಿತ್ತು.