ಕೋವಿಡ್: ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ

Covid: Task Force Committee formation at Taluk level in ballari

ಬಳ್ಳಾರಿ,ಜು.04: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಟಾಸ್ಕ್ಫೋಸರ್್ ಸಮಿತಿ ರಚಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

ಈ ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಈ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ತಡೆಗಟ್ಟಲು ಮತ್ತು ಕಾಲಕಾಲಕ್ಕೆ ಸರಕಾರ ಹೊರಡಿಸುವ ಮಾರ್ಗಸೂಚಿಗಳನ್ನು ತಾಲೂಕುಮಟ್ಟದಲ್ಲಿ ಪಾಲಿಸಲು ಹಾಗೂ ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲು,ಪ್ರಗತಿ ಕುರಿತು ಮೇಲುಸ್ತುವಾರಿ ಮಾಡಲು ಈ ಟಾಸ್ಕ್ಫೋಸರ್್ ಸಮಿತಿ ರಚಿಸಲಾಗಿದೆ.

ತಾಲೂಕಿನ ತಹಸೀಲ್ದಾರರು ಅಧ್ಯಕ್ಷರು, ತಾಪಂ ಇಒಗಳು ಸಹ ಅಧ್ಯಕ್ಷರು, ತಾಲೂಕು ವೈದ್ಯಾಧಿಕಾರಿಗಳು ಸದಸ್ಯ ಕಾರ್ಯದಶರ್ಿಗಳು, ತಾಲೂಕಿನ ಪೊಲೀಸ್ ಉಪಾಧೀಕ್ಷಕರು ಅಥವಾ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್, ಬಿಇಒ, ತಾಲೂಕು ಆಡಳಿತ ವೈದ್ಯಾಧಿಕಾರಿಗಳು, ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಸಮಾಜಕಲ್ಯಾಣ, ಬಿಸಿಎಂ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿದರ್ೇಶಕರು,ಸಿಡಿಪಿಒಗಳು ಈ ಸಮಿತಿಯ ಸದಸ್ಯರಾಗಿದ್ದಾರೆ