ಸಿಯೋಲ್,
ಮಾರ್ಚ್ 30 ,ದಕ್ಷಿಣ ಕೊರಿಯಾದಲ್ಲಿ ಕಳೆದ 24 ತಾಸಿನಲ್ಲಿ 78 ಕೊವಿದ್-19
ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಅವಧಿಯಲ್ಲಿ 195 ಜನರು
ಚೇತರಿಸಿಕೊಂಡಿದ್ದಾರೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ
(ಕೆಸಿಡಿಸಿ) ತಿಳಿಸಿದೆ.ಹಿಂದಿನ ದಿನ ಅಂದರೆ, ಭಾನುವಾರ ದೇಶದಲ್ಲಿ 152 ಹೊಸ
ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದವು. ಕೆಸಿಡಿಸಿ ಪ್ರಕಾರ, ದಕ್ಷಿಣ ಕೊರಿಯಾದಲ್ಲಿ
ಸದ್ಯ, 9,661 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿನಿಂದ ಈವರೆಗೆ 158 ಜನರು
ಸಾವನ್ನಪ್ಪಿದ್ದಾರೆ. ಭಾನುವಾರ ಸಾವಿನ ಸಂಖ್ಯೆ 152ರಷ್ಟಿತ್ತು. ಕಳೆದ 24
ತಾಸಿನಲ್ಲಿ ದಕ್ಷಿಣ ಕೊರಿಯಾದಲ್ಲಿ 195 ಜನರು ಕೊವಿದ್-19 ನಿಂದ ಚೇತರಿಸಿಕೊಂಡಿದ್ದಾರೆ.
ಹಿಂದಿನ ದಿನವಾದ ಭಾನುವಾರ, ದೇಶದಲ್ಲಿ 222 ರೋಗಿಗಳು ಚೇತರಿಸಿಕೊಂಡಿದ್ದರು. ಸದ್ಯ,
ದಕ್ಷಿಣ ಕೊರಿಯಾದಲ್ಲಿ ಗುಣಮುಖರಾದ ಒಟ್ಟು ರೋಗಿಗಳ ಸಂಖ್ಯೆ ಈಗ 5,228ರಷ್ಟಿದೆ. ಮಾರ್ಚ್
11 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕರೋನವೈರಸ್ (ಕೊವಿದ್-19)
ಸೋಂಕನ್ನು ವಿಶ್ವವ್ಯಾಪಿ ರೋಗವೆಂದು ಘೋಷಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ
ಅಂಕಿ-ಅಂಶಗಳಂತೆ, ಜಾಗತಿಕವಾಗಿ 7,21,000 ಕರೋನವೈರಸ್ ಪ್ರಕರಣಗಳು ದೃಢಪಟ್ಟಿವೆ. ಮಾರಕ
ಸೋಂಕಿನಿಂದ ಕೊವಿದ್ -19 ನಿಂದ 33,900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.