ಬೆಂಗಳೂರು, ಫೆ 26, ಇತ್ತೀಚೆಗಷ್ಟೇ ಬಂಧನವಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಆತನ ವಿರುದ್ಧ ತಿಲಕ್ ನಗರದಲ್ಲಿ ದಾಖಲಾಗಿದ್ದ ಪ್ರಕರಣದ ಕುರಿತು ಬುಧವಾರ ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. 2007ರಲ್ಲಿ ಶಬ್ನಮ್ ಡೇವಲಪರ್ಸ್ ಮೇಲಿನ ಗುಂಡಿನ ದಾಳಿ, ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.ಒಟ್ಟು 17ಜನರ ವಿರುದ್ಧ ಜಾರ್ಜ್ ಶೀಟ್ ನಲ್ಲಿ ಸಲ್ಲಿಕೆಯಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 15 ಜನರನ್ನು ಮಾತ್ರ ಬಂಧಿಸಲಾಗಿತ್ತು.ವಿಚಾರಣೆ ವೇಳೆ 15 ಆರೋಪಿಗಳು ತಾವು ರವಿ ಪೂಜಾರಿ ಸಹಚರರಾಗಿದ್ದು ಬಾಯ್ಬಿಟ್ಟಿದ್ದರು. ಕೃತ್ಯದ ಮೂಲ ಆರೋಪಿಗಳಾದ ರವಿ ಪೂಜಾರಿ ಹಾಗೂ ಸುರೇಶ್ ಪೂಜಾರಿ ಇಬ್ಬರೂ ತಲೆಮರೆಸಿಕೊಂಡಿದ್ದರು. ರವಿ ಪೂಜಾರಿ, ಸುರೇಶ್ ಪೂಜಾರಿ ಮೂಲಕ ಈ ಕೃತ್ಯ ಎಸಗಿದ್ದನು. ಸದ್ಯ ರವಿ ಪೂಜಾರಿ ಬಂಧನವಾಗಿದ್ದರೂ ಕೂಡ ಇನ್ನು ಸುರೇಶ್ ಪೂಜಾರಿ ನಾಪತ್ತೆಯಾಗಿದ್ದಾನೆ.