ಬಾಗಲಕೋಟೆ: ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬೀಳಗಿ ತಾಲ್ಲೂಕಿನ ಅನಗವಾಡಿ ಹೋಬಳಿಯ ಕಾತರಕಿ ಗ್ರಾಮದ ಬಸಪ್ಪ ಹೊಸಕೋಟಿ ರವರ ಕ್ಷೇತ್ರದಲ್ಲಿ ಬುಧವಾರ ಹತ್ತಿ ಬೆಳೆ ಕ್ಷೇತ್ರೋತ್ಸವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹ ವಿಸ್ತರಣಾ ನಿದರ್ೇಶಕ ಡಾ.ಆರ್.ಬಿ.ಬೆಳ್ಳಿ ಮಾತನಾಡಿ ಕಬ್ಬಿಗೆ ಹೋಲಿಸಿದರೆ ಹತ್ತಿ ಬೆಳೆಗೆ ಕಡಿಮೆ ನೀರು ಬೇಕಾಗುತ್ತದೆ. ಬರವನ್ನು ಸಹ ತಕ್ಕಮಟ್ಟಿಗೆ ತಡೆದುಕೊಳ್ಳುವ ಶಕ್ತಿ ಇರುವುದರಿಂದ ಹತ್ತಿಯನ್ನು ಹೇಗೆ ಲಾಭದಾಯಕವಾಗಿ ಬೆಳೆಯಬಹುದು ಎಂಬುದನ್ನು ರೈತರಿಗೆ ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಅಗಮಿಸಿದ್ದ ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ.ಬಿ.ಟಿ.ನಾಡಗೌಡ ಮಾತನಾಡಿ ಕಬ್ಬಿಗೆ ಪಯರ್ಾಯ ಬೆಳೆಯಾಗಿ ಹತ್ತಿಯನ್ನು ಹಾಗೂ ಪರಿವತರ್ಿತ ಬೆಳೆಯಾಗಿ ಕಬ್ಬಿಗೆ ಬರುವ ಉರಿಮಲ್ಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ಬೆಳೆದು ರೈತರು ಹೆಚ್ಚಿನ ಉಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಆದ ಡಾ.ಮೌನೇಶ್ವರಿ ಕಮ್ಮಾರ್ ಮಾತನಾಡಿ ಹತ್ತಿ ಮುಂಚೂಣಿಯಲ್ಲಿದ್ದು, ಪ್ರಾತ್ಯಕ್ಷಿಕೆಯ ಉದ್ದೇಶ ಮತ್ತು ಇದರ ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಗ್ರಾಮದ ಹಿರಿಯರು ಹಾಗೂ ರೈತರಾದ ಮಲ್ಲಪ್ಪ ಕೌಜಲಗಿ ಮಾತನಾಡಿ ಹತ್ತಿಯನ್ನು ತಮ್ಮ ಗ್ರಾಮದಲ್ಲಿ ಮೊದಲು ಬೆಳೆಯುತ್ತಿದ್ದು ಕಾರಣಾಂತರದಿಂದ ಹಾಗೂ ಹವಾಮಾನದ ವೈಪರೀತ್ಯದಿಂದ ಮತ್ತು ಕಬ್ಬಿಗೆ ಹೆಚ್ಚಿನ ಬೆಲೆ ಇರುವುದರಿಂದ ರೈತರು ಹತ್ತಿ ಬೆಳೆಯವುದನ್ನು ಬಿಟ್ಟು ಕಬ್ಬು ಬೆಳೆಯಲು ಪ್ರಾರಂಭಿಸಿದರು ಎಂದು ತಿಳಿಸಿದರು. ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ಹತ್ತಿ ಬೆಳೆದ ಅನುಭವವನ್ನು ಬಸಪ್ಪ ಹೊಸಕೋಟಿ ಹಂಚಿಕೊಂಡರು. ಹತ್ತಿ ಕ್ಷೇತ್ರೋತ್ಸವದ ಸಂಚಾಲಕರಾದ ಡಾ. ದಿನೇಶಕುಮಾರ್ ಎಸ್.ಪಿ., ವಿಜ್ಞಾನಿಗಳು (ಬೇಸಾಯಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ಬಾಗಲಕೋಟೆ ಇವರು ಕಬ್ಬಿಗೆ ಪಯರ್ಾಯವಾಗಿ ಹತ್ತಿ-ಅಲಸಂದಿ ಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ ಭೂ ಫಲವತ್ತತೆ ಹೆಚ್ಚಿಸಿ, ನೀರಿನ ಬಳಕೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.ರೈತರಿಗೆ ಮತ್ತು ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹತ್ತಿ ಬೆಳೆ ಕ್ಷೇತ್ರ ವೀಕ್ಷಣೆಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಆತ್ಮ ಯೋಜನೆಯ ಎಲ್ಲಾ ಸಿಬ್ಬಂದಿಯವರು ಭಾಗವಹಿಸಿದ್ದರು.