ಕೊರೊನಾಗೆ ಆರ್ಯುವೇದ ಔಷಧಿ.. ಸದ್ಯದಲ್ಲೇ ಪ್ರಯೋಗ.. ಕೇಂದ್ರ ಸಚಿವ ಶ್ರೀಪಾದ್ ನಾಯಕ್

ನವದೆಹಲಿ, ಮೇ 14,ಕೊರೊನಾ ಸಾಂಕ್ರಾಮಿಕ ಚಿಕಿತ್ಸೆಗೆ  ನಾಲ್ಕು ಆರ್ಯುವೇದ  ಔಷಧಿಗಳ ಬಗ್ಗೆ      ಪರೀಕ್ಷೆ  ನಡೆಸುತ್ತಿರುವುದಾಗಿ ಕೇಂದ್ರ  ಆಯುಷ್  ಸಚಿವ  ಶ್ರೀಪಾದ್  ವೈ. ನಾಯಕ್  ಹೇಳಿದ್ದಾರೆ.ಪ್ರಯೋಗಗಳು    ಇನ್ನೊಂದು ವಾರದಲ್ಲಿ  ಆರಂಭಿಸಲಾಗುವುದು. ಇದಕ್ಕಾಗಿ  ದೇಶದಲ್ಲಿರುವ  ಕೆಲ  ಆರ್ಯುವೇದ ಸಂಸ್ಥೆಗಳು ಕೂಡ ಸಹಕರಿಸಲು ಸಿದ್ದವಾಗಿವೆ ಎಂದು ಅವರು  ತಿಳಿಸಿದ್ದಾರೆ.ಆರ್ಯುವೇದ, ಯೋಗ,ಯುನಾನಿ, ಸಿದ್ದ, ಹೋಮಿಯೋಪತಿ .. ಈ ನಾಲ್ಕು  ಪದ್ದತಿಯಲ್ಲಿ ಔಷಧಿಗಳನ್ನು ಕೊರೊನಾ ಚಿಕಿತ್ಸೆಗೆ  ಬಳಸಲು ಸಾಧ್ಯವಾಗುವಂತೆ ಪ್ರಯೋಗಗಳು ಸದ್ಯದಲ್ಲೇ ಪ್ರಾರಂಭವಾಗಲಿವೆ ಎಂದು ವಿವರಿಸಿದ್ದಾರೆ.ಕೊರೊನಾ  ವೈರಸ್  ತಹಬಂದಿಗೆ ತರಲು ಈ  ದೇಶಿಯ  ಔಷಧಿಗಳು  ಸಹಾಯವಾಗಲಿವೆ  ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ  ಈ ವ್ಯಾದಿಗೆ  ಅರ್ಯುವೇದ ಔಷಧಿಗಳು  ಉಪಯೋಗಕ್ಕೆ ಬರಲಿವೆಯೇ ಎಂಬ ವಿಷಯವನ್ನು      ವೈಜ್ಞಾನಿಕವಾಗಿ ರುಜುವಾತಾಗಬೇಕು  ಎಂದರು.