ಧರಾಶಾಹಿಯಾದ ಭತ್ತ: ಪರಿಹಾರಕ್ಕೆ ಸಂಪತ್ ಕುಮಾರಗೌಡ ಮನವಿ
Corrupt paddy: Sampath Kumar Gowda appeals for relief
ಧರಾಶಾಹಿಯಾದ ಭತ್ತ: ಪರಿಹಾರಕ್ಕೆ ಸಂಪತ್ ಕುಮಾರಗೌಡ ಮನವಿ
ಬಳ್ಳಾರಿ 23: ಜಿಲ್ಲೆಯ ಸಿರುಗುಪ್ಪ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಧರಾಶಾಹಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ರೈತ ಮುಖಂಡರಾದ ಸಿರಿಗೇರಿ ಸಂಪತ್ ಕುಮಾರಗೌಡ ಅವರು ಮನವಿ ಮಾಡಿದ್ದಾರೆ.
ದಾಸಾಪುರ, ಸಿರಿಗೇರಿ, ತೆಕ್ಕಲಕೋಟೆ, ಕೊಂಚಿಗೇರಿ ಮತ್ತು ಹಾವಿನಾಳ ಸೇರಿದಂತೆ ಹಲವಾರು ಗ್ರಾಮಗಳ ರೈತರು ಬೆಳೆದಿದ್ದ ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ಹುಲುಸಾಗಿ ಫಸಲು ಬಂದಿತ್ತು. ಇನ್ನೂ ಹದಿನೈದು ದಿನಗಳಲ್ಲಿ ಭತ್ತದ ಕಟಾವು ಮಾಡುವ ಸಿದ್ಧತೆಯಲ್ಲಿ ಇದ್ದರು. ಇದೀಗ ಏಕಾಏಕಿ ಸುರಿದ ಭಾರೀ ಮತ್ತು ಗಾಳಿಯಿಂದಾಗಿ ಭತ್ತ ನೆಲಕ್ಕೆ ಉರುಳಿದೆ. ಸಾಲ ಮಾಡಿಕೊಂಡು ಭತ್ತ ನಾಟಿ ಮಾಡಿ, ಪೋಷಣೆ ಮಾಡಿದ್ದ ರೈತರಿಗೆ ಇದೀಗ ದಿಕ್ಕು ತೋಚದಂತಾಗಿದೆ. ಮುಂದಿನ ಬೇಸಿಗೆಗೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳ ಅಳವಡಿಕೆ ಕಾರ್ಯ ಇರುವುದರಿಂದ ಬೇಸಿಗೆ ಬೆಳೆಗೂ ಜಲಾಶಯದಿಂದ ನೀರು ಲಭಿಸುವುದಿಲ್ಲ. ಇದರಿಂದ ರೈತರು ಮಾಡಿದ ಸಾಲ ತೀರಿಸಲಾಗದೇ, ಬಡ್ಡಿಗೆ ಹಣ ಜೋಡಿಸಲಾಗದೇ, ಬೇಸಿಗೆ ಬೆಳೆಗೆ ಅಣಿಯಾಗದೇ ಆಘಾತಕ್ಕೊಳಗಾಗಿದ್ದಾರೆ.
ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣವೇ ಪರಿಹಾರ ಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಂಪತ್‌ಕುಮಾರಗೌಡ ಅವರು ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 