ನವದೆಹಲಿ, ಮೇ 22,ಕಾಂಗ್ರೆಸ್ ಮುಖಂಡ ಸಂಜಯ್ ಜಾ ಅವರಿಗೆ ಕೊರೊಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ಖಚಿತವಾಗಿದೆ. ಟ್ವೀಟ್‌ನಲ್ಲಿ, ತಮಗೆ ಸೋಂಕು ಇರುವುದನ್ನು ಅವರೆ ಖಚಿತಪಡಿಸಿದ್ದು ಮುಂದಿನ 10 ರಿಂದ 12 ದಿನಗಳವರೆಗೆ ಹೋಮ್ ಕ್ವಾರೆಂಟೈನ್ ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿ ಸೋಂಕು ಇರುವುದು ಖಚಿತವಾಗಿದೆ ಹೀಗಾಗಿ 10-12 ದಿನಗಳವರೆಗೆ ನಾನು ಮನೆ ಯಲ್ಲೇ ಸ್ವಯಂ ಕ್ವಾರೆಂಟೈನ್ ಒಳಗಾಗಲಿದ್ದೇನೆ ಅಪಾಯಗಳ ಬಗ್ಗೆ, ಸೋಂಕಿನ ಯಾರಿಗೂ ಉದಾಸೀನತೆ ಬೇಡ ಎಂದು ಎಲ್ಲರೂ ಎಚ್ಚರವಾಗಿರಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.