ಚೈನಾದಿಂದ ಬಂದಿದ್ದ ಬಿಹಾರ ಯುವತಿಗೆ ಕರೊನಾ ವೈರಸ್ ಶಂಕೆ

ಪಾಟ್ನಾ (ಬಿಹಾರ), ಜ ೨೭, ಚೀನಾದಲ್ಲಿ   ವ್ಯಾಪಿಸಿರುವ  ಮಾರಣಾಂತಿಕ    ಕರೊನಾ   ವೈರಸ್   ಬಿಹಾರ ರಾಜ್ಯವನ್ನೂ  ತಲುಪಿರುವ  ಬಗ್ಗೆ  ಭೀತಿ  ವ್ಯಕ್ತವಾಗಿವೆ.    ಚೈನಾದಿಂದ  ರಾಜ್ಯದ ಛಾಪ್ರಾ   ಪಟ್ಟಣಕ್ಕೆ  ಬಂದಿರುವ  ಓರ್ವ ಯುವತಿಗೆ  ಕರೊನಾ ವೈರಸ್  ಲಕ್ಷಣಗಳು ಕಂಡು ಬಂದಿರುವ  ಹಿನ್ನಲೆಯಲ್ಲಿ ಆಕೆಯನ್ನು ಛಾಪ್ರಾ  ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ  ದಾಖಲಿಸಲಾಗಿದೆ. ಈ  ಯುವತಿಯಲ್ಲಿ   ಕರೊನಾ ವೈರಸ್  ಲಕ್ಷಣಗಳು  ಕಂಡುಬಂದಿರುವ  ಕಾರಣ, ಆಕೆಗೆ  ಹೆಚ್ಚಿನ  ಚಿಕಿತ್ಸೆ  ಕಲ್ಪಿಸಲು  ಪಾಟ್ನಾದಲ್ಲಿರುವ   ವೈದ್ಯಕೀಯ ಕಾಲೇಜಿಗೆ  ದಾಖಲಿಸಲಾಗಿದೆ ಎಂದು ಪಾಟ್ನಾ ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.   ಈವರೆಗೆ   ಚೀನಾದಿಂದ   ನಮ್ಮ ದೇಶಕ್ಕೆ ದೇಶಕ್ಕೆ ೧೩೭ ವಿಮಾನಗಳಲ್ಲಿ ೨೯,೭೦೦ ಪ್ರಯಾಣಿಕರು ಬಂದಿದ್ದು,  ಈ ಪೈಕಿ  ಏಳು ಮಂದಿಗೆ  ಸೋಂಕು  ಇರುವುದು  ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದ ನೂರು ಮಂದಿಗೆ  ಕರೊನಾ ವೈರಸ್ ಸೋಂಕು  ತಗುಲಿರಬಹುದು  ಎಂಬ ಶಂಕೆಯ ಮೇಲೆ ಅವರನ್ನು    ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಚೈನಾ ಸೇರಿದಂತೆ  ವಿಶ್ವದ ಹಲವು ದೇಶಗಳಲ್ಲಿ   ಕರೊನಾ ವೈರಸ್  ಕಾಣಿಸಿಕೊಂಡಿರುವ  ಹಿನ್ನಲೆಯಲ್ಲಿ   ಪ್ರಧಾನಿ ನರೇಂದ್ರ ಮೋದಿ   ಈ ಕುರಿತು  ಉನ್ನತ ಮಟ್ಟದ ಸಭೆನಡೆಸಿ ಪರಾಮರ್ಶೆ ನಡೆಸುವ ನಿರೀಕ್ಷೆಯಿದೆ.