ರಿಯೋ ಡಿ ಜನೈರೋ, ಜೂನ್ 12, ಬ್ರೆಜಿಲ್ ನಲ್ಲಿ ಮತ್ತೆ 1239 ಜನರು ಕೊರೊನಾ ವೈರಾಣು ಸೋಂಕಿಗೆ ಬಲಿಯಾಗಿದ್ದು ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 40,919 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ 30,412 ಜನರಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ ಗುರುವಾರ ತಡರಾತ್ರಿ ವೇಳೆಗೆ 8,08,828 ರಷ್ಟಿತ್ತು ಎಂದು ಸಚಿವಾಲಯದ ಅಂಕಿಅಂಶ ತಿಳಿಸಿದೆ.ಇದಕ್ಕೂ ಒಂದು ದಿನ ಮೊದಲು ಬ್ರೆಜಿಲ್ ನಲ್ಲಿ 32,913 ಹೊಸ ಕೊರೊನಾ ವೈರಾಣು ಸೋಂಕು ಪ್ರಕರಣಗಳು ಹಾಗೂ 1,274 ಸಾವಿನ ಪ್ರಕರಣಗಳು ವರದಿಯಾಗಿತ್ತು ಕೊರೊನಾ ಸೋಂಕಿನಿಂದ ವಿಶ್ವದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್ – 19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಈವರೆಗೆ ಜಗತ್ತಿನಾದ್ಯಂತ 75 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು ಸುಮಾರು 4.21 ಲಕ್ಷ ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.